
ಉಡುಪಿ: ಪುತ್ತಿಗೆ ಶ್ರೀಗಳು (Puttige Shree) ಇಸ್ಲಾಂ ಭಯೋತ್ಪಾದನೆ ಧರ್ಮವಲ್ಲ ಎಂಬ ಪುಸ್ತಕವನ್ನು ರಿಲೀಸ್ (Book Release) ಮಾಡಿದ್ರು. ಇದಕ್ಕೆ ಸಂಬಂಧಿಸಿದ ಫೋಟೋ (Photo), ವೀಡಿಯೋಗಳನ್ನು ಕೆಲವರು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಇದು ಈಗಿನದ್ದೇನೋ ಎಂಬಂತೆ ಹಿಂದೂ ಸಂಘಟನೆಗಳು ಪುತ್ತಿಗೆ ಶ್ರೀಗಳ ವಿರುದ್ಧ ಸಿಡಿದಿವೆ.
ಕೂಡಲೇ ಪುತ್ತಿಗೆ ಶ್ರೀಗಳು ಕ್ಷಮೆ ಕೇಳಬೇಕು ಇಲ್ಲ ಅಂದ್ರೆ ನಿಮ್ಮ ಮಠ ಉಳಿಯಲ್ಲ ಎಂದು ಪ್ರಮೋದ್ ಮುತಾಲಿಕ್ (Pramod Muthalik) ಎಚ್ಚರಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ಶ್ರೀಮಠ ಸ್ಪಷ್ಟನೆ ನೀಡಿದ್ದು, ಸಮಾಜದಲ್ಲಿ ಒಡಕುಂಟು ಮಾಡಲು ಕೆಲವರು ಹತ್ತು ವರ್ಷಗಳ ಹಿಂದಿನ ಕಾರ್ಯಕ್ರಮದ ಬಗ್ಗೆ ವೈರಲ್ ಮಾಡ್ತಿದ್ದಾರೆ. ಸನಾತನ ಧರ್ಮದ ಮೊದಲ ಆದ್ಯತೆ ಕೂಡ ಶಾಂತಿ ಸೌಹಾರ್ದತೆ. ಶ್ರೀಗಳ ವಿಶ್ವತೋಮುಖ ವ್ಯಕ್ತಿತ್ವ ಅರಿಯದೆ ಕೆಲ ವಿಕೃತ ಮನಸ್ಸಿನವರು ಹೀಗೆ ಮಾಡ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಪೂಜ್ಯರೇ ಯಾವ ಪುಸ್ತಕವನ್ನು ನೀವು ಬಿಡುಗಡೆ ಮಾಡಿದ್ದೀರಿ? ನಾನು ಹೇಳುತ್ತೇನೆ ನೀವು ಕ್ಷಮೆ ಕೇಳಬೇಕು. ಇಲ್ಲಾಂದ್ರೆ ನಾಳೆ ನಿಮ್ಮ ಮಠ ಕೂಡ ಉಳಿಯಲ್ಲ ಅನ್ನೋದನ್ನು ನಾನು ನೆನಪಿಸುತ್ತೇನೆ. ಹಿಂದೂ ಧರ್ಮದ ಪ್ರತಿಪಾದಕರಾದ ನೀವು ಇಸ್ಲಾಂ ಭಯೋತ್ಪಾದಕ ಧರ್ಮ ಅಲ್ಲ ಎನ್ನುವಂತ ಪುಸ್ತಕವನ್ನು ಬಿಡುಗಡೆ ಮಾಡುವಂತಹ ಅಗತ್ಯತೆ ಏನಿತ್ತು? ಮಸೀದಿಯನ್ನು ಉದ್ಘಾಟಿಸುವಂತದ್ದು ಇಂತಹ ಪ್ರವೃತ್ತಿಯಿಂದಲೇ ಇಸ್ಲಾಂ ಬೆಳೆಯುತ್ತಿದೆ. ಹಿಂದೂ ಧರ್ಮ ನಾಶವಾಗುತ್ತಿದೆ. ಇದು ನಿಮ್ಮ ಗಮನಕ್ಕೂ ಕೂಡ ಬಂದಿದೆ ಎಂದು ಮುತಾಲಿಕ್ ವಾಗ್ದಾಳಿ ನಡೆಸಿದ್ದಾನೆ
ಕಾಮಾಲೆ ಕಣ್ಣಿಗೆ ಲೋಕವೆಲ್ಲಾ ಹಳದಿಯಂತೆ . ಸತ್ಯವನ್ನು ತಾನು ಅರಿಯಲ್ಲ , ಅರಿತವರಿಗೆ ಹೇಳಲು ಬಿಡುವುದಿಲ್ಲ. ಬೆಂಕಿ ಕಟ್ಟಿಗೆಯನ್ನು ಸುಡುವಂತೆ , ಅಸೂಯೆ ಮಾನವನ ಮನಸ್ಸನ್ನು ಸುಡುತ್ತದೆ.