
ಜೆರುಸಲೇಂ: ಇಸ್ರೇಲ್ (Israel) ಪಡೆಗಳು ಪಶ್ಚಿಮ ದಂಡೆಯಲ್ಲಿ ಕಾರ್ಯಾಚರಣೆ ನಡೆಸಿ 10 ಮಂದಿ ಪ್ಯಾಲೆಸ್ಟೀನಿಯನ್ನರನ್ನ (Palestinians )ಹತ್ಯೆ ಮಾಡಿದ ಬೆನ್ನಲ್ಲೇ ಇಸ್ರೇಲ್ನಲ್ಲಿ (Terror Attack) ಗುಂಡಿನ ದಾಳಿ (Shoot out) ನಡೆದಿದೆ.
ಇಸ್ರೇಲ್ ಜೆರುಸಲೇಮ್ನ (Jerusalem) ಹೊರವಲಯದಲ್ಲಿರುವ ಸಿನಗಾಗ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ 7 ಮಂದಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ವಿದೇಶಾಂಗ ಸಚಿವಾಲಯ (Israel’s Foreign Ministry) ತಿಳಿಸಿದೆ. 70 ವರ್ಷದ ಮಹಿಳೆ ಸೇರಿದಂತೆ ಹಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಸ್ರೇಲ್ ಪೊಲೀಸರು, ಇದನ್ನು `ಭಯೋತ್ಪಾದಕ ದಾಳಿ’ ಎಂದು ಖಚಿತಪಡಿಸಿದ್ದಾರೆ. ಈ ಭಯೋತ್ಪಾದಕ ದಾಳಿಯನ್ನು ಪ್ಯಾಲೆಸ್ಟೀನಿಯ ಸಂಘಟನೆ ಹೊಗಳಿದೆ. ಆದರೆ ದಾಳಿ ಮಾಡಿರುವ ಹೊಣೆಯನ್ನು ತಳ್ಳಿಹಾಕಿದೆ.
ಪರಸ್ಪರ ರಾಕೆಟ್ ದಾಳಿ: ಇಸ್ರೇಲ್ ಸೇನೆ ಮತ್ತು ಪ್ಯಾಲೆಸ್ಟೀನ್ ಸೈನಿಕರ ಗುಂಪುಗಳ ನಡುವೆ ಗಾಜಾಪಟ್ಟಿಯಲ್ಲಿ ಪರಸ್ಪರ ಕ್ಷಿಪಣಿ, ರಾಕೆಟ್ ದಾಳಿ ನಡೆದಿದ್ದು, ಕ್ಷಿಪಣಿ, ಗುಂಡಿನ ದಾಳಿಯಲ್ಲಿ 61 ವರ್ಷದ ಮಹಿಳೆ, ಕನಿಷ್ಠ ಏಳು ಮಂದಿ ಪಾಲೇಸ್ತಿನ್ಅ ಸುನೀಗಿದ್ದಾರೆ. ಈ ಬೆಳವಣಿಗೆ ಜೆರುಸಲೇಂನ ನಿವಾಸಿಗಳಲ್ಲಿ ಆತಂಕವನ್ನು ಮೂಡಿಸಿದೆ. ಪ್ಯಾಲೆಸ್ಟೀನ್ ಗುಂಪು ರಾಕೆಟ್ ದಾಳಿಯನ್ನು ನಿಲ್ಲಿಸಿದಲ್ಲಿ ಪ್ರತಿಯಾಗಿ ಸೇನೆ ಕೂಡಾ ವಾಯುದಾಳಿಯನ್ನು ಸ್ಥಗಿತಗೊಳಿಸಲಿದೆ ಎಂದು ಇಸ್ರೇಲ್ನ ರಕ್ಷಣಾ ಸಚಿವರು ಸುಳಿವು ನೀಡಿದ್ದಾರೆ.