Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಯುವತಿ ದೇಹದ ಮೇಲಿನ ಕಪ್ಪು ಚುಕ್ಕೆ ಗುರುತಿಸಿದ AI.. ಫೋಟೋ ಅಪ್​ಲೋಡ್​ ಮಾಡುವಾಗ ಹುಷಾರ್​!

    ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು – ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

    ಸ್ವಾತಂತ್ರ್ಯೋತ್ಸವ ಪ್ರಯುಕ್ತ SDPI ಯಿಂದ ಬಿಸಿ ರೋಡ್ ನಲ್ಲಿ ತಿರಂಗಾ ರ್‍ಯಾಲಿ ಹಾಗೂ ಸಾರ್ವಜನಿಕ ಸಭೆ

    ಬಿಜೆಪಿ ಮಾಡಿದ 40% ಕಮಿಷನ್ ಹಗರಣ ಮತ್ತು ಕೋವಿಡ್ ಹಗರಣದ ವಿರುದ್ಧ ಕ್ರಮಕ್ಕೆ ಮುಂದಾಗದ ಕಾಂಗ್ರೆಸ್‌ ಸರಕಾರ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ – ಎಸ್‌ಡಿಪಿಐ:

    15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ: ಸರ್ಕಾರ ಆದೇಶ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ಕರಾವಳಿ

ಸಾಧನೆಗೊಂದು ಸಲಾಂ…ಪೆರ್ನಾಜೆ ಜೇನು ಗಡ್ಡದ ಕುಟುಂಬ ಜೇನಿನೊಂದಿಗೆ ಸರಸ ಜೇನಿನ ಜೊತೆಗಾರ.

editor tv by editor tv
January 16, 2023
in ಕರಾವಳಿ, ಸುದ್ದಿ
0
ಸಾಧನೆಗೊಂದು ಸಲಾಂ…ಪೆರ್ನಾಜೆ ಜೇನು ಗಡ್ಡದ ಕುಟುಂಬ ಜೇನಿನೊಂದಿಗೆ ಸರಸ ಜೇನಿನ ಜೊತೆಗಾರ.
1.9k
VIEWS
Share on FacebookShare on TwitterShare on Whatsapp

ಸಾಧನೆಗೊಂದು ಸಲಾಂ.

ಜೇನುತುಪ್ಪ ತಿನ್ನಲು ಮಾತ್ರ ತುಂಬಾ ಸಿಹಿ ಆದರೆ ಜೇನುನೊಣಗಳು ತುಂಬಾ ಅಪಾಯಕಾರಿ ಜೇನ್ನೊಣಗಳು ಕಚ್ಚಿದರೆ ಮಾತ್ರ ಅದರಿಂದ ವಿಪರೀತ ನೋವಾಗುವುದು ಸಹಜ ಆದರೆ ಇಂತಹ ಜೇನುನೊಣಗಳು ಮುಖದ ಮೇಲೆ ಗಡ್ಡ ದಂತೆ ಕುಳಿತು ಬಿಟ್ಟರೆ ಆಶ್ಚರ್ಯಪಡಬೇಡಿ ಅಭೂತಪೂರ್ವ ಸಾಧನೆ ಮಾಡುತ್ತಿರುವ ಕುಮಾರ ಪೆರ್ನಾಜೆ ಅವರಿಗೆ ಜೇನುನೊಣ ಎಂದರೆ ತುಂಬಾ ಪ್ರೀತಿ ಅವುಗಳಿಗೂ ಅಷ್ಟೇ ಹಾರಿಬಂದು ಅವರ ಸುತ್ತ ಮುತ್ತುತ್ತವೆ ಅಷ್ಟೇ ಅಲ್ಲ ಮುಖದ ಮೇಲೆಲ್ಲಾ ಹರಿದಾಡುತ್ತವೆ ಗಡ್ಡದಂತೆ ಗೂಡು ಕಟ್ಟುತ್ತವೆ ಚಿತ್ರದಲ್ಲಿ ನೋಡಿದರೆ ಅರ್ಥವಾಗುತ್ತದೆ ಇದೇ ನೋಡಿ ಜೇನು ಮತ್ತು ಪೆರ್ನಾಜೆ ಯವರ ಅಸಲಿ ಪ್ರೀತಿ.

ವಿಭಿನ್ನ ಆಕಾರದಲ್ಲಿ ಕ್ರಿಯಾಶೀಲರಾಗಿ ಅರಳುತ್ತಿರುವ ದಕ ಜಿಲ್ಲೆಯ ಪುತ್ತೂರು ತಾಲೂಕಿನ ನೆ.ಮೂಡ್ನರು ಗ್ರಾಮದ ಕುಮಾರ ಪೆರ್ನಾಜೆ ಕುಟುಂಬವನ್ನು ನೋಡಿದಾಗಲಂತೂ ಜೇನುನೊಣ ಅಂತ ಹೇಳಿದರೆ ಜನರು ಬಹಳ ಹೆದರುತ್ತಾರೆ. ಜೇನು ಸಾಮಾನ್ಯವಾಗಿ ವಿವಿಧ ಬೆಳೆಗಳ ಜೊತೆ ಕೃಷಿಯನ್ನು ನಂಬಿರುವವರು ಜನತೆ ತನ್ನ ಅವಿನಾಭಾವ ಸಂಬಂಧವನ್ನು ತೊಡಗಿಸಿಕೊಂಡಿದ್ದಾರೆ ಯಾವುದೇ ಅಂಜಿಕೆಯಿಲ್ಲದೆ ಸ್ನೇಹವಿದ್ದು ಜೇನಿನ ಗೂಡಿಗೆ ಕೈ ಹಾಕಿ ಎಂಥವರನ್ನೂ ಆಶ್ಚರ್ಯಚಕಿತ ಆಗುವಂತೆ ಮಾಡಿದ್ದಾರೆ

ಜೇನು ನೊಣದ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದು ಕಣ್ಣು-ಕಿವಿ ಮುಖದ ಮೇಲೆ ಹರಿದಾಡಿದರೂ ಏನು ಮಾಡುತ್ತಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಮನಸ್ಸಿನ ನೆಮ್ಮದಿಗಾಗಿ ಆಧುನಿಕ ಬದುಕಿನ ಜಂಜಾಟದಲ್ಲಿ ಅಪಾಯಕಾರಿ ಜೇನುಗೂಡನ್ನು ನೋಡಿ ಬದುಕಬಹುದು ಎನ್ನುವ ಸೌಮ್ಯ ಪೆರ್ನಾಜೆ.
ರಾಣಿಯನ್ನು ಗಲ್ಲದಲ್ಲಿ ಬಿಟ್ಟಾಗ ಮುಖದ ತುಂಬಾ ಆವರಿಸಿ ಬಂದು ಕುಳಿತುಕೊಳ್ಳುತ್ತವೆ ಎನ್ನುವ ನಮ್ಮಲ್ಲಿ ತಾಳ್ಮೆ ಮತ್ತು ಸಹನೆ ಇದ್ದರೆ ಒಂದು ಅಭೂತಪೂರ್ವ ಕಲ್ಪನೆ ಇಂದು ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಿಕೊಳ್ಳುತ್ತದೆ ಜನರು ಅಂಜಿಕೆಯಿಂದ ಜೇನುಗೂಡಿಗೆ ಬೆಂಕಿಯಿಟ್ಟು ನಾಶಗೊಳಿಸುವ ಸಂಸ್ಕೃತಿ ನಮ್ಮದಾಗದೇ ಅವುಗಳನ್ನು ನಮ್ಮಂತೆ ಬದುಕಲು ಬಿಡಿ ಜೇನಿಗೋಸ್ಕರ ನಾಶಾ ಮಾಡಬೇಡಿರಿ ಎನ್ನುವ ಕುಮಾರ ಭಾವನೆಯನ್ನು ಅರ್ಥಮಾಡಿಕೊಂಡು ಬದುಕಿದರೆ ಜೀವನ ಸುಂದರ ದಾರಿ ಇಲ್ಲ ಅಂತ ನಡೆಯುವುದನ್ನೇ ನಿಲ್ಲಿಸಬಾರದು ನಾವು ನಡೆದಿದ್ದೆ ದಾರಿ ಆಗಬೇಕು ಆ ದಾರಿ ನಾಲ್ಕು ಜನಕ್ಕೆ ಸ್ಫೂರ್ತಿಯಾಗಬೇಕು ಮನೆ-ಮನ ಎಲ್ಲಾ ಒಂದು ಮಾಡುವ ಕೆಲಸ ಪೆರ್ನಾಜೆ ಕುಟುಂಬದವರ ಅದ್ಭುತ ಅಪರೂಪದ ಊಹೆಗೂ ನಿಲುಕದ ಜೇನು ಗಡ್ಡದ ಚಿತ್ರಣವಿದೆ. ಪತ್ನಿಯ ಸೌಮ್ಯ ಪೆರ್ನಾಜೆ, ಮಕ್ಕಳಾದ ನಂದನ್ ಕುಮಾರ್, ಚಂದನ್ ಕುಮಾರ್ ಪೆರ್ನಾಜೆ ಜೇನಿನ ಗೂಡು ನಾವೆಲ್ಲ ಬೇರೆಯಾದರೆ ಏನಿಲ್ಲ ಎಂಬಂತೆ ಹಾಡು ಅಕ್ಷರಶಹ ಇಲ್ಲಿದೆ
ಅವರು ಈಗಾಗಲೇ ಹಲವು ಬಾರಿ ಜೇನು ಗಡ್ಡ ಪ್ರದರ್ಶಿಸಿದ್ದು ಶಾಲಾ ಮಕ್ಕಳಿಗೆ, ರೋಟರಿಕ್ಲಬ್, ಕಾಲೇಜ್ ಮಕ್ಕಳಿಗೆ, ಹೀಗೆ ಹಲವಾರು ಕಡೆಗಳಲ್ಲಿ ಜೇನು ಗಡ್ಡ, ಜೇನಿನ ಬಗ್ಗೆ ಸೈಡ್ ಶೋ ಮುಖಾಂತರ ಕಾರ್ಯಗಾರಗಳನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು ಈಗಾಗಲೇ ರಾಷ್ಟ್ರೀಯ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿ, ಆವಿಷ್ಕಾರಿ ರೈತ ರೈತ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಜಿಲ್ಲಾ ತಾಲೂಕು ಸನ್ಮಾನಗಳನ್ನು ಪಡೆದಿದ್ದು ಗ್ರಾಮೀಣ ಕಲಾ ಪ್ರತಿಭೆಗಳನ್ನು ಒಂದುಗೂಡಿಸಿ ಸ್ವರ ಸಿಂಚನ ಕಲಾತಂಡದಿಂದ ಹಲವಾರು ಕಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿದ್ದು ಹಲವಾರು ಸಮಸ್ಯೆಗಳನ್ನು ದಾಟಿ ಬಂದಿದ್ದಾರೆ ಹಾಡುಗಾರಿಕೆ ಪ್ರತಿಭೆಗೆ ಅವಕಾಶ ನೀಡಿದವರು.
ನಾವೆಲ್ಲ ಸಾಧನೆ ಮಾಡಿದಾಗ ಹೆಜ್ಜೆಗುರುತು ಮೂಡಿಸಬೇಕು ಸಂಗೀತವನ್ನು ಪ್ರಸಾರ ಮಾಡುವುದು ಮತ್ತು ಹೊಸ ಹೊಸ ಸಂಶೋಧನೆ ಇವರ ಹವ್ಯಾಸವಾಗಿದ್ದು ಇದೀಗ ಹನಿ ಪಾರ್ಕ್ (ಜೇನಿನ ಕನಸಿನ ಮನೆ) ಮಾಡುತ್ತಿದ್ದಾರೆ. ಯಾವ ವ್ಯಕ್ತಿಗೆ ಇನ್ನೊಬ್ಬರನ್ನು ಬೆಳೆಸುವ ದೊಡ್ಡ ಗುಣವಿರುತ್ತದೆ ವ್ಯಕ್ತಿ ತನಗರಿವಿಲ್ಲದಂತೆ ಬಹಳ ಎತ್ತರಕ್ಕೆ ಬೆಳೆಯುತ್ತಾರೆ ಎಂಬುದಕ್ಕೆ ಜೇನು ಗಡ್ಡ ಧಾರಣೆ ಮಾಡಿ ಅದ್ಭುತವನ್ನು ನೋಡಿದ್ದೀರಾ. ಇವರ ಇಡೀ ಕುಟುಂಬವೇ ಜೇನು ಗಡ್ಡದ ಕುಟುಂಬ ಹಾಗೆ ಇವರು ಕೋತಿ ಕೋವಿ, ಬೋರ್ಡೋ ದ್ರಾವಣ ಸ್ಪ್ರೈನ್ ಟೆಕ್ನಿಕ್, ಸಿಮೆಂಟ್ ಶೀಟ್ ನಲ್ಲಿ ಜೇನುಪೆಟ್ಟಿಗೆ, ಕೃಷಿವಲಯದಲ್ಲಿ ಹೊಸ ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ವಿಶಿಷ್ಟ ಮತ್ತು ಗಮನಾರ್ಹ ಸಾಧನೆ ಮಾಡಿದ್ದಾರೆ ಲೋಕದ ಜೀವನಾಧಾರವಾದ ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡು ಅನಿರತ ಸಾಧನೆಯ ಗರಿಮೆಯನ್ನು ತಮ್ಮದಾಗಿಸಿಕೊಂಡು ಶಿಷ್ಟತೆಯ ಸಾಧಕತನ ಮೆರೆದು ಕೃಷಿಯ ಮಹತ್ಕಾರ್ಯವನ್ನು ಸಾಧಿಸಿ ಜೇನು ಗಡ್ಡ ಕಲೆಯ ಅನನ್ಯ ಸಾಧಕರಾಗಿದ್ದಾರೆ.

ನಿಜವಾಗಿಯೂ ಕೆಲಸ ಮಾಡುವವರಿಗೆ ಅವಕಾಶ ಮತ್ತು ದಾರಿಯಷ್ಟೆ ಕಾಣಿಸುತ್ತದೆ ಕೆಲಸದಿಂದ ಯಾವಾಗಲೂ ವಿಮುಖರಾಗಲು ಬಯಸುವವರಿಗೆ ನೆಪವಷ್ಟೇ ಕಾಣಿಸುತ್ತದೆ ಯಶ ಎಂದರೆ ಬಯಸಿದ್ದು ಸಿಗುವುದು ಸುಖ ವೆಂದರೆ ಸಿಕ್ಕಿದ್ದನ್ನು ಬಯಸುವುದು ಯಶಸ್ಸು ಆಸೆಯ ಕನಸಲ್ಲ ಪರಿಶ್ರಮದ ಪರಿಣಾಮ ಸಾಧನೆಗೆ ಪ್ರಯತ್ನ ಮುಖ್ಯ ಸುಮ್ಮನೆ ಕುಳಿತವರಿಗೆ ಯಾವ ಹೆಸರು ಲಭಿಸಲಾರದು ಗುರಿಯನ್ನು ತಲುಪುವ ವರೆಗೂ ಸಾಧನೆ ನಿರಂತರವಾಗಿರಲಿ ಮನಸ್ಸಿನೊಳಗೆ ಸ್ಪಷ್ಟತೆ ಎನ್ನುವುದು ಸ್ವಾಭಾವಿಕ ಗುಣ ತನಗೆ ಗೊತ್ತಿಲ್ಲದೇ ವ್ಯಕ್ತಿಗಳು ಹೊಸತೇನನ್ನು ಹುಡುಕುತ್ತಾರೆ ಇದೇ ಹೊಸ ಹೊಸ ಅನ್ವೇಷಣೆಗೆ ಕಾರಣ ಆದರೆ ಅಷ್ಟೇ ಕ್ರಿಯಾತ್ಮಕ ಶೋಧನೆ ಕನಸುಗಳ ಸಾಧನೆಗೆ ಸಾಧಿಸುವ ಗುರಿ ಮುಖ್ಯ ಬದುಕಿನಲ್ಲಿ ಕನಸು ಕಾಣೋದು ಸುಲಭ ಆದರೆ ಅದನ್ನು ನನಸು ಮಾಡಿಕೊಳ್ಳುವುದೂ ಬಲುಕಷ್ಟ ತ್ಯಾಗ ಪರಿಶ್ರಮ ಇಚ್ಚಾಶಕ್ತಿ ಇರುವ ತಂಡ ಒಂದಿದ್ದರೆ ಯಾವುದನ್ನು ಸಾಧಿಸಲು ಸಾಧ್ಯ.

ಜೇನುತುಪ್ಪ ದಂತಹ ಸಿಹಿಯನ್ನು ಪಡೆಯಬೇಕಿದ್ದರೆ ಜೇನುನೊಣಗಳ ಅಂತೆ ಒಟ್ಟಿಗೆ ಇರುವುದನ್ನು ಕಲಿಯಬೇಕು ಹೂವಿನಲ್ಲಿರುವ ಮಕರಂದದ ಆಸೆಗೆ ಜೇನುನೊಣವು ಬರುತ್ತದೆ ಇನ್ನಿತರ ನೊಣಗಳು ಬರುತ್ತವೆ ಜೇನುಹುಳ ಕೆ ಸಿಕ್ಕ ಮಕರಂದ ಮಾತ್ರ ಜೇನಾಗಿ ಎಲ್ಲರ ಉಪಯೋಗಕ್ಕೆ ಬರುತ್ತದೆ ಯೋಗ್ಯ ನಿಗೆ ಏನೇ ಸಿಕ್ಕರೂ ಅದು ಯೋಗ್ಯತೆಯನ್ನೆ ಪಡೆಯುತ್ತದೆ. ಪ್ರಕೃತಿಪ್ರಿಯ, ಪ್ರಾಣಿ ಪ್ರಿಯ, ಜೇನು ಗಡ್ಡದ ವಿಸ್ಮಯ ವ್ಯಕ್ತಿಯ ಸವಿ ಸವಿ ನೆನಪುಗಳು ಬೇಕು. ಹಳ್ಳಿಯ ವಿಶೇಷ ಕುಟುಂಬದ ಹಳ್ಳಿ ಸ್ಪೆಷಲ್ ನಿಮಗೆ ಇಷ್ಟವಾಗಿದೆ.
ಬರಹ:- ಸವಿತಾ ಕೊಡಂದೂರು.

C/o. ಕುಮಾರ್ ಪೆರ್ನಾಜೆ, ಪುತ್ತೂರು ಪೆರ್ನಾಜೆ ಮನೆ ಮತ್ತು ಅಂಚೆ ಪುತ್ತೂರು ತಾಲೂಕು ದ.ಕ. 5 7 4 2 2 3

ಮೊ:- 94 80 240 643.

Previous Post

ಮಹಿಳೆಯರಿಗೆ ಕಾಂಗ್ರೆಸ್‌ ಬಂಪರ್‌ ಗಿಫ್ಟ್‌: ಮಾಸಿಕ 2 ಸಾವಿರ ರೂ. ಸಹಾಯಧನ

Next Post

ಚಿಕ್ಕಮಗಳೂರಿನಲ್ಲಿ ‘ಕೈ’ ನಾಯಕ ಅಕ್ಮಲ್ ಮನೆ ಮೇಲೆ ಐಟಿ ದಾಳಿ, ಕಾರ್ಯಕರ್ತರಿಂದ ಪ್ರತಿಭಟನೆ

Next Post
ಚಿಕ್ಕಮಗಳೂರಿನಲ್ಲಿ ‘ಕೈ’ ನಾಯಕ ಅಕ್ಮಲ್ ಮನೆ ಮೇಲೆ ಐಟಿ ದಾಳಿ, ಕಾರ್ಯಕರ್ತರಿಂದ ಪ್ರತಿಭಟನೆ

ಚಿಕ್ಕಮಗಳೂರಿನಲ್ಲಿ ‘ಕೈ’ ನಾಯಕ ಅಕ್ಮಲ್ ಮನೆ ಮೇಲೆ ಐಟಿ ದಾಳಿ, ಕಾರ್ಯಕರ್ತರಿಂದ ಪ್ರತಿಭಟನೆ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.