
ಬೆಂಗಳೂರು (ಜ.16): ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಧಿಕಾರಕ್ಕರ ಬಂದಾಗಿನಿಂದ ಮಹಿಳೆಯರಿಗೆ ಯಾವುದೇ ಕೊಡುಗೆಯನ್ನೂ ನೀಡಿಲ್ಲ. ಆದರೆ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಗೇಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿ ಪ್ರತಿ ಮನೆಯ ಒಡತಿಗೆ ಮಾಸಿಕ 2 ಸಾವಿರ ರೂ. ಸಹಾಯಧನ ನೀಡಲಾಗುವುದು ಎಂದು ಕಾಂಗ್ರೆಸ್ ಘೋಷಣೆ ಮಾಡಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿದ್ದ ‘ನಾ ನಾಯಕಿ’ ಕಾರ್ಯಕ್ರಮದಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿದೆ. ನಾನು ಸೋನಿಯಾ ಗಾಂಧಿ ನೋಡಿಕೊಂಡು ಬೆಳದಿದ್ದೇನೆ. ಸೋನಿಯಾ ಗಾಂಧಿ ರಾಜೀವ್ ಗಾಂಧಿ ಮದುವೆಯಾಗಿ ಭಾರತಕ್ಕೆ ಬಂದರು. ದೇಶದ ಸಂಸ್ಕೃತಿ ತಿಳಿದುಕೊಳ್ಳಲು ಸೋನಿಯಾ ಪ್ರಯತ್ನ ಪಟ್ಟರು. ಅನಿವಾರ್ಯ ಕಾರಣದಿಂದ ಜನರ ಸೇವೆ ರಾಜಕೀಯಕ್ಕೆ ಬಂದಿದ್ದಾರೆ. ನಂತರ, ಮಹಿಳೆಯರು ಜೀವನ ಸಾಗಿಸಲು ಎಷ್ಟು ಕಷ್ಟ ಪಡ್ತಾ ಇದ್ದಾರೆ. ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಎಲ್ಲ ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ ಪ್ರತಿ ತಿಂಗಳು ಎಲ್ಲ ಮನೆಯ ಯಜಮಾನಿಗೆ ತಲಾ 2 ಸಾವಿರ ರೂ. ಸಹಾಯಧನ ನೀಡುವ ಗೃಹ ಲಕ್ಷ್ಮೀ ಯೋಜನೆ ಜಾರಿಗೆ ತರಲಾಗುತ್ತದೆ ಎಂದು ಹೇಳಿದರು.
ಕರೋನ ಬಳಿಕ ಜೀವನ ದುಸ್ತರ ಆಗಿದೆ. ಕಷ್ಟ ನನಗೂ ಕೂಡ ಮನವರಿಕೆ ಆಗಿದೆ. ಸರ್ಕಾರ ಬದಲಿಸುವ ಸಮಯ ಬಂದಿದೆ. ನಿಮಗೆ ಉದ್ಯೋಗ, ಮಕ್ಕಳ ಭವಿಷ್ಯ, ಮಕ್ಕಳ ವಿಧ್ಯಾಭ್ಯಾಸ ಎಲ್ಲ ಸರಿಯಾಗಬೇಕು. ದೇಶದಲ್ಲಿ ಶೇ.50 ಮಹಿಳೆಯರು ಇದ್ದೇವೆ. ನಾವೆಲ್ಲರೂ ಆರ್ಥಿಕವಾಗಿ ಸ್ವಾವಲಂಬಿ ಆಗಬೇಕು. ನೀವು ಶಕ್ತಿವಂತರಗಬೇಕು, ನಿಮ್ಮ ಶಕ್ತಿ ಅರಿವಾಗಬೇಕು. ನೀವು ರಾಜಕೀಯ ಅರಿತುಕೊಳ್ಳಬೇಕು. ರಾಜಕೀಯ ಪಕ್ಷಗಳು ಮಹಿಳೆಯರ ಕಡಗಣನೆ ಮಾಡಿವೆ. ರಾಜಕೀಯ ಪಕ್ಷಗಳಿಗೆ ಈ ವೇದಿಕೆ ಸಂದೇಶ ನೀಡಬೇಕು ಎಂದು ತಿಳಿಸಿದರು.
ಬಿಜೆಪಿ ಎಂಟು ವರ್ಷದಿಂದ ಆಡಳಿತ ಮಾಡುತ್ತಿದೆ. ನಿಮ್ಮ ಮಕ್ಕಳಿಗೆ ಉದ್ಯೋಗ ಸಿಕ್ಕಿದೇಯಾ..? ಮೂರು ತಿಂಗಳಲ್ಲಿ ಚುನಾವಣೆ ಬರ್ತಾ ಇದೆ. ನೀವೆಲ್ಲಾ ಯಾರಿಗೆ ಮತ ಹಾಕಬೇಕು ಎಂದು ವಿಚಾರ ಮಾಡಬೇಕು. ರಾಜ್ಯದಲ್ಲಿ ಶೇ. 40 ಸರ್ಕಾರ ಇದೆ. ನಿಮ್ಮ ತೆರಿಗೆ ಹಣ ಭ್ರಷ್ಟಾಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ 8 ಸಾವಿರ ಕೋಟಿ ಬಜೆಟ್ ಇದೆ. ಅಷ್ಟು ಕೆಲಸ ಬಿಜೆಪಿ ಮಾಡಿದೇಯಾ..? ಸರ್ಕಾರ ಭ್ರಷ್ಟಾಚಾರದಲ್ಲಿ ನಿರತವಾಗಿದೆ ಎಂದು ಆರೋಪ ಮಾಡಿದರು.