
ಬಂಟ್ವಾಳ: ಅನ್ಯ ಕೋಮಿನ ಯುವತಿಗೆ ಚಾಕಲೇಟ್ ಬೇಕಾ ಎಂದು ಕೇಳಿದ ಮುಸ್ಲಿಂ ವಿದ್ಯಾರ್ಥಿ ಮೇಲೆ ಯುವಕರ ತಂಡವೊಂದು ಹಲ್ಲೆ (Assault on student) ನಡೆಸಿದ ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ವಿದ್ಯಾರ್ಥಿ ಮಹಮ್ಮದ್ ಶಾಕೀರ್ ನೀಡಿದ ದೂರಿನ ಅನ್ವಯ ವಿಟ್ಲ ಠಾಣೆ ಪೊಲೀಸರು, ಕೆಲಿಂಜದ ಚಂದ್ರಶೇಖರ್, ಪ್ರಜ್ವಲ್, ರೋಹಿತ್ ಮತ್ತು ಇತರ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವೀರಕಂಬದ ಮಂಗಲಪದವು ನಿವಾಸಿ ಮಹಮ್ಮದ್ ಶಾಕೀರ್ ಮಂಗಳೂರಿನ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾನೆ. ಎಂದಿನಂತೆ ಕಾಲೇಜಿಗೆ ಹೋಗಿ ಬಸ್ ಮೂಲಕ ಮನೆಗೆ ವಾಪಸ್ ಆಗುತ್ತಿದ್ದಾಗ ಅನ್ಯಕೋಮಿನ ವಿದ್ಯಾರ್ಥಿನಿ ಜೊತೆ ಚಾಕಲೇಟ್ ಬೇಕೇ ಎಂದು ಕೇಳಿದ್ದಾನೆ. ಯುವಕರ ತಂಡ ಮಹಮ್ಮದ್ ಶಾಕೀರ್ನನ್ನು ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಗುರುವಾರದಂದು ಈ ಘಟನೆ ನಡೆದಿದ್ದು, ಶಾಕೀರ್ ನೀಡಿದ ದೂರಿನಲ್ಲಿ ಕೆಲಿಂಜದ ಚಂದ್ರಶೇಖರ್, ಪ್ರಜ್ವಲ್, ರೋಹಿತ್ ಮತ್ತು ಇತರ ಮೂವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿಲಾಗಿದೆ. ಗುರುವಾರ ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ.