

▪️ಅಭಿವೃದ್ಧಿ ಬಿಟ್ಟು ಲವ್ ಜಿಹಾದ್ ಕಡೆ ಗಮನ ಹರಿಸಲು ಕರೆ ನೀಡಿದ ಸಂಸದ ಕಟೀಲ್ ಗೆ ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ ಪ್ರತ್ಯುತ್ತರ
ಮಂಗಳೂರು,ಜ03: ಸಂಸದ ನಳಿನ್ ಕುಮಾರ್ ಕಟೀಲ್ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ರಸ್ತೆ ಚರಂಡಿ ಅಭಿವೃದ್ಧಿ ವಿಷಯ ಬಿಟ್ಟು ಬಿಡಿ ಲವ್ ಜಿಹಾದ್ ಕಡೆಗೆ ಗಮನ ಕೊಡಿ ಎಂಬ ಹೇಳಿಕೆಯು ಬಿಜೆಪಿ ಮತ್ತು ಸಂಘಪರಿವಾರದ ನೈಜ ಹಿಡನ್ ಅಜೆಂಡಾವನ್ನು ತೋರ್ಪಡಿಸಿ ಬಿಜೆಪಿ ಯಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ವಾಸ್ತವವನ್ನು ಬಹಿರಂಗ ಪಡಿಸಿದ್ದಾರೆ ಎಂದು ಎಸ್ಡಿಪಿಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಆಥಾವುಲ್ಲ ಜೋಕಟ್ಟೆ ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಗೊಳಿಸಿರುವ ಅವರು ಬಿಜೆಪಿ ಸಂಘಪರಿವಾರ ತನ್ನ ಹುಟ್ಟಿನಿಂದಲೇ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದು ದೇಶದ ನೈಜ ಸಮಸ್ಯೆಗಳನ್ನು ಮತ್ತು ಅಭಿವೃದ್ಧಿಯ ವಿಚಾರದಲ್ಲಿ ಆಸಕ್ತಿ ವಹಿಸದೆ ಜನರನ್ನು ಪರಸ್ಪರ ಧರ್ಮಾದರಿತವಾಗಿ ವಿಭಜಿಸಿ ಆ ಮೂಲಕ ಕೋಮು ಗಲಭೆ ನಡೆಸಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾಗೂ ಜನರ ಪ್ರಾಣ ಹಾನಿ ಮಾಡುವುದರಲ್ಲೇ ದಿನ ಕಳೆಯುತ್ತಿದೆ.
ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಧರ್ಮದ ವಿಚಾರಗಳನ್ನು ಮುನ್ನೆಲೆಗೆ ತಂದೇ ಅಧಿಕಾರ ಪಡೆದು ತಮ್ಮ ಕೋಮು ವೈಷಮ್ಯವನ್ನು ಇನ್ನಷ್ಟು ಅಧಿಕಗೊಳಿಸಿದ್ದಾರೆ.
ಈಗ ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟ ರೀತಿಯಲ್ಲಿ ಅಧಿಕಾರ ಚಲಾಯಿಸಲು ತಿಳಿಯದೆ ಅಭಿವೃದ್ಧಿ ವಿಚಾರಗಳನ್ನು ಬಿಟ್ಟು ಜನರನ್ನು ಭಾವನಾತ್ಮಕ ವಿಚಾರಗಳಿಗೆ ಪ್ರೋತ್ಸಾಹ ನೀಡಿ ಪರಸ್ಪರ ಗಲಭೆ ನಡೆಸುವ ಸಂಘಪರಿವಾರದ ಹಿಡನ್ ಅಜೆಂಡಾದ ಭಾಗವಾಗಿದೆ ಸಂಸದ ಕಟೀಲ್ ರವರ ಹೇಳಿಕೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದ.ಕ ಜಿಲ್ಲೆಯಲ್ಲಿ ನಳಿನ್ ಕುಮಾರ್ ಕಟೀಲ್ ಗೆ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಇರುವುದರಿಂದ ಹಾಗೂ ಸ್ವಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಇವರ ವಿರುದ್ಧ ಇರುವುದರಿಂದ ಸಂಘಪರಿವಾರ ಮುಖಂಡರ ಮನವೊಲಿಸಲು ಇಂತಹ ವಿಭಜನಕಾರಿ ಹೇಳಿಕೆ ನೀಡಿ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿರುವುದು ಜನರಿಗೆ ಅರ್ಥವಾಗದ ವಿಚಾರವೇನಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಅದೇ ರೀತಿ ದ.ಕ ಪೋಲಿಸ್ ಇಲಾಖೆಯು ಏನು ಮಾಡುತ್ತಿದೆ.ಒಂದು ವೇಳೆ ಇಂತಹ ಹೇಳಿಕೆಯನ್ನು ಇತರ ಧರ್ಮದ ನಾಯಕರು ನೀಡಿರುತ್ತಿದ್ದರೆ ಕೂಡಲೇ ಕ್ರಮ ಕೈಗೊಳ್ಳುತ್ತಿರಲಿಲ್ಲವೇ?
ನ್ಯಾಯದಲ್ಲಿ ತಾರತಮ್ಯ ಮಾಡುವ ಪೋಲಿಸ್ ಇಲಾಖೆಯ ಕ್ರಮವೂ ಖಂಡನೀಯ ಎಂದರು.
ಪೊಲೀಸ್ ಇಲಾಖೆ ಕೂಡಲೇ ಇವರ ವಿರುದ್ಧ ಸುಮೊಟೊ ಕೇಸ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ