


ಮಂಗಳೂರು :ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಇದರ ಅಧೀನ ಸಂಸ್ಥೆ ಸಹರಾ ಆಂಗ್ಲ ಮಾಧ್ಯಮ ಶಾಲೆ ಅಡ್ಡೂರು ಇದರ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಇಂದು ವಿಜೃಂಭಣೆ ಯಿಂದ ಜರಗಿತು. ಸ್ಪರ್ಧಾತ್ಮಕ ಬಹುಮಾನ ಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಬಂಟ್ವಾಳ ಕಾವಳ ಮುಡೂರ್ ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ಶೇಕ್ ಅದಂ ಸಾಹೇಬ್ ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಮಕ್ಕಳು ಎಷ್ಟರ ಮಟ್ಟಿಗೆ ಕಲಾವಿದರಾಗಿ ಉಳಿದು ಕೊಳ್ಳುತ್ತಾರೆ ಎಂದು ಪ್ರಶ್ನೆಯಾಗಿ ಉಳಿದಿದೆ,ಮಕ್ಕಳಲ್ಲಿ ಸಾಧನೆಯ ಕೊರತೆ, ಉದಾಸೀನಾತೆ,ಬೇಜವಾಬ್ದಾರಿ ಎದ್ದು ಕಾಣುತಿದೆ ಎಂದರು.ಶಿಕ್ಸಕರೊಂದಿಗೆ ಪೋಷಕರು ಕೂಡ ಪರಿಹಾರಕ್ಕೆ ಪ್ರಯತಿಸಬೇಕೆಂದರು.
ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಲತೀಫ್,ಅಬ್ದುಲ್ ರಝಕ್ ರವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು


ಮುಸ್ಲಿಂ ವೆಲ್ಫೇರ್ ಸಂಸ್ಥೆಯ ಅಧ್ಯಕ್ಸರಾದ ಯು. ಪಿ. ಇಬ್ರಾಹಿಂ, ಉಪಾಧ್ಯಕ್ಷ ಎನ್ಕಾ. ಈ ಮುಹಮ್ಮದ್ ಕಾರ್ಯದರ್ಶಿ ಎನ್. ಇಸ್ಮಾಯಿಲ್,ಕರೆಸ್ಪೋಡೆಂಟ್ ಎ. ಕೆ. ಇಸ್ಮಾಯಿಲ್, ಮಸೀದಿ ಅಧ್ಯಕ್ಷರಾದ ಅಹ್ಮದ್ ಬಾವ, ಪ್ರಿನ್ಸಿಪಾಲ್ ಕೇಶವ,ಪಿ. ಟಿ. ಎ. ಅಧ್ಯಕ್ಷರಾದ ವಿಶ್ವಮ್ಬರ,ಖಜಾಂಜಿ ಎ. ಕೆ ಅಶ್ರಫ್,ಹಾಜಿ ಎಮ್. ಹೆಚ್. ಮಯ್ಯದ್ದಿ,ಡಾ. ಸಿದ್ಧಿಕ್,ಅಬ್ದುಲ್ ಖಾದರ್ ಇಡ್ಮ, ನೂರುಲ್ ಅಮೀನ್, ಪಿ. ಟಿ. ಎ. ಉಪಧ್ಯಕ್ಷೆ ಪೂಜಾ ಕೆ.ಬಿ. ಎಸ್ ಮುಹಮ್ಮದ್,ಎ. ಎಸ್ ಅಬ್ದುಲ್ ಆಜ್ಹೀಜ್, ಎ ಕೆ. ಮುಹಮ್ಮದ್,ಜಬ್ಬಾರ್,ಎ. ಜಿ. ಅಬ್ದುಲ್ ಖಾದರ್, ಜಿ. ಪಿ, ಅಬ್ದುಲ್ ರಹೀಮ್,ಎ. ಜಿ. ಮುಹಮ್ಮದ್ ನಡುಗುಡ್ಡೆ, ಹಸನ್ ಬಾವ,ಬಿ. ಎಸ್. ರಫೀಕ್,ಕಾಸಿಂ, ಝುಬೈರ್ ಸಾಲ್ಲಜೆ,ಇದ್ದಿನಬ್ಬ, ಸುಲೈಮಾನ್,ಎ. ಕೆ ಹನೀಫ್, ವಿದ್ಯಾರ್ಥಿ ನಾಯಕರಾದ ರಿಷಾನ್ ಮತ್ತು ಫಾತಿಮಾ ಆಫೀಸಾ ಉಪಸ್ಥಿತರಿದ್ದರು



