

ಮಲ್ಲೂರು ಟುಡೇ ಮಿಡಿಯಾ ಸೆಂಟರ್ ಹಾಗೂ ಆಧಾರ್ ಸೇವಾ ಕೇಂದ್ರ ಮಂಗಳೂರು ಇದರ ಆಶ್ರಯದಲ್ಲಿ ಉಚಿತ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಮಹಾಮೇಳ
——————————————
ಮಲ್ಲೂರು ಟುಡೇ ಮಿಡಿಯಾ ಸೆಂಟರ್ ಹಾಗೂ ಆಧಾರ್ ಸೇವಾ ಕೇಂದ್ರ ಮಂಗಳೂರು ಇದರ ಆಶ್ರಯದಲ್ಲಿ 5 ದಿನಗಳ ಕಾಲ ನಡೆಯಲಿರುವ ಉಚಿತ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಮಹಾಮೇಳ ಕಾರ್ಯಕ್ರಮದ ಉದ್ಘಾಟನೆಯು ದಿನಾಂಕ 05-12-2022 ಸೋಮವಾರದಂದು ದೆಮ್ಮಲೆ ತೌಫಿಕ್ ಎಸೋಸಿಯೇಷನ್ ಕಚೇರಿಯಲ್ಲಿ ನಡೆಯಿತು. ಡಿಸೆಂಬರ್ 5 ರಿಂದ 9 ರವರೆಗೆ ಐದು ದಿನಗಳ ಕಾಲ ಆಧಾರ್ ಮಹಾಮೇಳ ಕಾರ್ಯಕ್ರಮ ನಡೆಯಲಿರುವುದು.
ಮಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಂ.ಇ ಇಸ್ಮಾಯಿಲ್ ಬೊಲ್ಲಂಕಿಣಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬದ್ರಿಯಾ ಜುಮ್ಮಾ ಮಸ್ಜಿದ್ ಮಲ್ಲೂರು ದೆಮ್ಮಲೆ ಅಧ್ಯಕ್ಷರಾದ ಮುಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಿದ್ದರು.

ಮಲ್ಲೂರು ಟುಡೇ ಮಿಡಿಯಾ ಸೆಂಟರ್ ಚೆಯರ್ ಮ್ಯಾನ್ ಜಬ್ಬಾರ್ ಮಲ್ಲೂರು ಪ್ರಾಸ್ತಾವಿಕ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಸಯ್ಯದ್ ಹಸನ್ ಹೈದ್ರೋಸ್ ಜುಮ್ಮಾ ಮಸ್ಜಿದ್ ಉದ್ದಬೆಟ್ಟು ಅಧ್ಯಕ್ಷರಾದ ಮುಹಮ್ಮದ್ ಹನೀಫ್ ಬೊಲ್ಲಂಕಿಣಿ, ಅಲ್ ಮಸ್ಜಿದುಲ್ ಬದ್ರಿಯಾ ಜುಮ್ಮಾ ಮಸ್ಜಿದ್ ಬದ್ರಿಯಾನಗರ ಅಧ್ಯಕ್ಷರಾದ ಮುಹಮ್ಮದ್ ಅಶ್ರಫ್, ಗ್ರಾಮ ಪಂಚಾಯತ್ ಸದಸ್ಯರಾದ ಸುಮಾ ಅರುಣ್ ಶೆಟ್ಟಿ, ಡಿ.ಅಬುಸಾಲಿ ದೆಮ್ಮಲೆ, ತೌಫಿಕ್ ಎಸೋಸಿಯೇಷನ್ ದೆಮ್ಮಲೆ ಅಧ್ಯಕ್ಷರಾದ ಮುಹಮ್ಮದ್ ಆಶೀಫ್ ದೆಮ್ಮಲೆ, ಆಧಾರ್ ಸೇವಾ ಕೇಂದ್ರ ಮಂಗಳೂರಿನ ಹೃತಿಕ್, ದೆಮ್ಮಲೆ ಅಂಗನವಾಡಿ ಕೇಂದ್ರದ ಬಿ.ಎಲ್.ಒ ಅಲ್ತಾಫ್ ದೆಮ್ಮಲೆ, ಮಲ್ಲೂರು ಟುಡೇ ಮಿಡಿಯಾ ಸೆಂಟರ್ ಚೀಫ್ ಕನ್ವೀನರ್ ಜಾಬಿರ್ ಉದ್ದಬೆಟ್ಟು ಉಪಸ್ಥಿತರಿದ್ದರು.