

ನವದೆಹಲಿ: ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್(Congress) ಮತ್ತು ಬಿಜೆಪಿ(BJP) ಮಧ್ಯೆ ನೆಕ್ ಟು ನೆಕ್ ಫೈಟ್ ಇದೆ ಎಂದು ಚುನಾವಣೋತ್ತರ ಸಮೀಕ್ಷೆಗಳು(Himachal Pradesh Exit Poll Result) ಹೇಳಿವೆ.
ಹಲವು ಸಮೀಕ್ಷೆಗಳು ಬಿಜೆಪಿಗೆ ಅಲ್ಪ ಬಹುಮತ ಸಿಗಬಹುದು ಎಂದು ಭವಿಷ್ಯ ನುಡಿದಿವೆ. ಆದರೆ ಇಂಡಿಯಾ ಟುಡೇ ಸಮೀಕ್ಷೆ ಕಾಂಗ್ರೆಸ್‌ಗೆ ಬಹುಮತ ಸಿಗಲಿದೆ ಎಂದು ಹೇಳಿದೆ.
ಪ್ರತಿ ಬಾರಿ ಹಿಮಾಚಲದಲ್ಲಿ ಸರ್ಕಾರ ಬದಲಾಗುತ್ತಿತ್ತು. ಆದರೆ ಈ ಬಾರಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಏರಿದರೆ 1990ರ ನಂತರ ಸತತ ಎರಡನೇ ಬಾರಿ ಅಧಿಕಾರಕ್ಕೆ ಏರಿದ ಪಕ್ಷ ಎಂದು ಇತಿಹಾಸ ಬರೆಯಲಿದೆ.
ಇಂಡಿಯಾ ಟುಡೇ ಸಮೀಕ್ಷೆ ಪ್ರಕಾರ ಬಿಜೆಪಿ 24-34, ಕಾಂಗ್ರೆಸ್ 30-40 ಸ್ಥಾನ ಗೆಲ್ಲಲಿದೆ. ಇಂಡಿಯಾ ಟಿವಿ ಬಿಜೆಪಿಗೆ 35-40, ಕಾಂಗ್ರೆಸ್‌ಗೆ 26-31 ಸ್ಥಾನ ನೀಡಿದೆ.
ರಿಪಬ್ಲಿಕ್ ಟಿವಿ ಬಿಜೆಪಿಗೆ 34-39, ಕಾಂಗ್ರೆಸ್ 28-33, ಆಪ್ 0-1 ಸ್ಥಾನ ಗೆಲ್ಲಬಹುದು ಎಂದು ತಿಳಿಸಿದೆ. ನ್ಯೂಸ್ ಎಕ್ಸ್ ಬಿಜೆಪಿಗೆ 32-40, ಕಾಂಗ್ರೆಸ್ 27-34 ಸ್ಥಾನವನ್ನು ಗೆಲ್ಲಬಹುದು ಎಂದು ಭವಿಷ್ಯ ನುಡಿದಿದೆ.
ಗುಜರಾತ್ ಚುನಾವಣೆಗೆ ಮುನ್ನ ಹಿಮಾಚಲ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆದಿತ್ತು. ನವೆಂಬರ್ 12 ರಂದು ಒಂದೇ ಹಂತದಲ್ಲಿ ಎಲ್ಲಾ 68 ಸ್ಥಾನಗಳಿಗೆ ಮತದಾನ ನಡೆದಿದ್ದು, ಶೇ. 75.6ರಷ್ಟು ಮತದಾನ ಆಗಿತ್ತು.
ಸರಳ ಬಹುಮತಕ್ಕೆ 35 ಸ್ಥಾನಗಳ ಅಗತ್ಯವಿದ್ದು, ಫಲಿತಾಂಶ ಡಿ. 8 ಗುರುವಾರ ಪ್ರಕಟವಾಗಲಿದೆ.