

ಬೆಂಗಳೂರು: ಇಂದು ಮಧ್ಯರಾತ್ರಿಯಿಂದಲೇ ಪ್ರತಿ ಲೀಟರ್ ನಂದಿನಿ(Nandini) ಹಾಲು ಮತ್ತು ಮೊಸರಿನ(Milk and Curd) ದರ 3 ರೂ. ಏರಿಕೆಯಾಗಲಿದೆ

ನಂದಿನಿ ಹಾಲಿನ ಮಾರಾಟ ದರವನ್ನು ಲೀಟರ್‌ಗೆ 3 ರೂ. ಹೆಚ್ಚಿಸಲು ರಾಜ್ಯ ಹಾಲು ಮಹಾಮಂಡಳ (ಕೆಎಂಎಫ್) ನಿರ್ಧರಿಸಿದೆ. ಕೆಎಂಎಫ್‌ನ ವಾರ್ಷಿಕ ಸಭೆಯಲ್ಲಿ ಹಾಲಿನ ಮಾರಾಟ ದರ ಹೆಚ್ಚಿಸುವ ಸಂಬಂಧ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿತ್ತು. ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯದ 14 ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ದರ ಏರಿಕೆಗೆ ಒಲವು ವ್ಯಕ್ತಪಡಿಸಿದ್ದರು. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಸರ್ಕಾರ ಬೆಲೆ ಏರಿಕೆಗೆ ಅನುಮೋದನೆ ನೀಡಿದೆ.

ಯಾವ ಹಾಲಿಗೆ ಎಷ್ಟು ದರ ಇಲ್ಲಿದೆ ವಿವರ
- ಟೋನ್ಡ್ ಹಾಲು 37 ರೂ ರಿಂದ 40 ರೂಗೆ ಏರಿಕೆ
- ಹೋಮೋಜಿನೈಸ್ಡ್ ಹಾಲು 38 ರೂ ರಿಂದ 41 ರೂಗೆ ಏರಿಕೆ
- ಹೊಮೊಜಿನೈಸ್ಡ್ ಹಸುವಿನ ಹಾಲು 42 ರೂ ರಿಂದ 45 ರೂಗೆ ಏರಿಕೆ
- ಸ್ಪೆಷಲ್ ಹಾಲು 43 ರೂ ರಿಂದ 46 ರೂಗೆ ಏರಿಕೆ
- ಶುಭಂ ಹಾಲು 43 ರೂ ರಿಂದ 46 ರೂಗೆ ಏರಿಕೆ
- ಹೊಮೊಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು 44 ರೂ ರಿಂದ 47 ರೂಗೆ ಏರಿಕೆ
- ಸಮೃದ್ಧಿ ಹಾಲು 48 ರೂ ರಿಂದ 51 ರೂಗೆ ಏರಿಕೆ
- ಸಂತೃಪ್ತಿ ಹಾಲು 50 ರೂ ರಿಂದ 53 ರೂಗೆ ಏರಿಕೆ
- ಡಬಲ್ ಟೋನ್ಡ್ ಹಾಲು 36 ರೂ ರಿಂದ 39 ರೂಗೆ ಏರಿಕೆ
- ಮೊಸರು ಪ್ರತಿ ಕೆಜಿಗೆ 45 ರೂ ರಿಂದ 48 ರೂಗೆ ಏರಿಕೆ