

ಚಂಡೀಗಢ: ಪ್ರತಿಭಟನೆ ವೇಳೆ ಶಿವಸೇನೆಯ ಮುಖಂಡ (Shiv Sena Leader) ಸುಧೀರ್ ಸೂರಿ (Sudhir Suri) ಅವರ ಮೇಲೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಅವರು ಸಾವನ್ನಪ್ಪಿರುವ ಘಟನೆ ಪಂಜಾಬ್‌ನ (Punjab) ಅಮೃತಸರದಲ್ಲಿ (Amritsar) ಶುಕ್ರವಾರ ನಡೆದಿದೆ.
ವರದಿಗಳ ಪ್ರಕಾರ ಪಂಜಾಬ್‌ನ ಅಮೃತಸರದಲ್ಲಿ ಶಿವಸೇನೆಯ ಮುಖಂಡರು ದೇವಸ್ಥಾನದ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಗುಂಪಿನಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ.
ಈ ವರ್ಷ ಜುಲೈನಲ್ಲಿ ನಿರ್ದಿಷ್ಟ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಭಾಷಣ ಮಾಡಿ, ಧಾರ್ಮಿಕ ಭಾವನೆಯನ್ನು ಕೆರಳಿಸಿರುವ ಆರೋಪದ ಮೇಲೆ ಸೂರಿ ಬಂಧನಕ್ಕೊಳಗಾಗಿ ಬಿಡುಗಡೆಯೂ ಆಗಿದ್ದರು. ಆಗಿನಿಂದ ಸುಧೀರ್ ಸೂರಿ ಅವರು ಸುದ್ದಿಯಲ್ಲಿದ್ದರು.

ಇದು 2 ದಿನಗಳ ಅವಧಿಯಲ್ಲಿ ಶಿವಸೇನೆ ನಾಯಕರ ಮೇಲೆ ನಡೆದಿರುವ 2ನೇ ದಾಳಿಯಾಗಿದೆ. ಗುರುವಾರ ಮುಂಜಾನೆ ಟಿಬ್ಬಾ ರಸ್ತೆಯಲ್ಲಿರುವ ಗ್ರೆವಾಲ್ ಕಾಲೋನಿಯಲ್ಲಿ ಪಂಜಾಬ್ ಶಿವಸೇನೆಯ ನಾಯಕ ಅಶ್ವನಿ ಚೋಪ್ರಾ ಅವರ ಮನೆ ಬಳಿ ಇಬ್ಬರು ಸೈಕಲ್‌ನಲ್ಲಿ ಬಂದ ವ್ಯಕ್ತಿಗಳು ಗುಂಡು ಹಾರಿಸಿದ್ದರು.