
ಬೆಂಗಳೂರು: ದೇವಸ್ಥಾನಕ್ಕೆ ಬಳಿಯ ಚಪ್ಪಲಿ ಸ್ಟ್ಯಾಂಡ್ ಕಾಯುವುದಕ್ಕೆ ಮೀಸಲಾತಿ(Reservation) ಇದ್ಯಾ ಎಂಬ ಪ್ರಶ್ನೆ ಎದ್ದಿದೆ. ಬೆಂಗಳೂರಿನ ಬಸವನಗುಡಿಯ ಪ್ರಸಿದ್ಧ ದೊಡ್ಡ ಗಣಪತಿ ದೇವಸ್ಥಾನ(Basavanagudi Dodda Ganapathi Temple) ಕರೆದ ಟೆಂಡರ್‌ನಿಂದಾಗಿ ಈ ಪ್ರಶ್ನೆ ಎದ್ದಿದೆ.
ದೊಡ್ಡ ಗಣಪತಿ ದೇವಸ್ಥಾನದ ಆಡಳಿತ ಮಂಡಳಿ ಕರೆದ ಟೆಂಡರ್‌ನಲ್ಲಿ(Tender) ಇಂಥಾದ್ದೇ ಸಮುದಾಯದವರು ಭಾಗವಹಿಸಬೇಕು ಎಂಬ ಅಂಶವಿದೆ. ಬರುವ ಭಕ್ತರ ಪಾದರಕ್ಷೆ ಕಾಯಲು ಟೆಂಡರ್ ಆಹ್ವಾನಿಸಿದ್ದು, ಪರಿಶಿಷ್ಟ ವರ್ಗದವರು ಮಾತ್ರ ಪಾಲ್ಗೊಳ್ಳಬೇಕು ಎಂದು ಪ್ರಕಟಿಸಿದೆ.
ಜೊತೆಗೆ ಪೂಜಾ ಸಾಮಾಗ್ರಿ ಮಾರಾಟ, ಈಡುಗಾಯಿ ಆಯ್ದುಕೊಳ್ಳುವ ಹಕ್ಕಿನ ಟೆಂಡರ್, ಎಳನೀರು ಮಾರಾಟದ ಟೆಂಡರ್ ಅನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.
ದೇವಸ್ಥಾನದ ಈ ಟೆಂಡರ್ ಪ್ರಕಟಣೆಗೆ ವ್ಯಾಪಕ ಟೀಕೆಗೆ ವ್ಯಕ್ತವಾಗಿದೆ. ಇದು ವಿವಾದ ಆಗುತ್ತಿದ್ದಂತೆ ಎಚ್ಚೆತ್ತ ದೊಡ್ಡ ಗಣೇಶ ದೇಗುಲದ ಆಡಳಿತ ಮಂಡಳಿ, ಟೆಂಡರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಪ್ರಕಟಣೆ ಹೊರಡಿಸಿದೆ.
ಮುಜರಾಯಿ ಇಲಾಖೆ ತಹಶೀಲ್ದಾರರು ಈಗ ಈ ರೀತಿಯಾಗಿ ಹೇಗೆ ಟೆಂಡರ್ ಕರೆದಿದ್ದೀರಿ ವಿವರಣೆ ನೀಡಿ ಎಂದು ದೊಡ್ಡ ಗಣೇಶ ದೇಗುಲದ ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದಾರೆ.