Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    ಸ್ಮಗ್ಲಿಂಗ್ ಪ್ರಕರಣ: ಸ್ಟಾರ್ ನಟ ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಮನೆ ಮೇಲೆ ದಾಳಿ

    ಸ್ಮಗ್ಲಿಂಗ್ ಪ್ರಕರಣ: ಸ್ಟಾರ್ ನಟ ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಮನೆ ಮೇಲೆ ದಾಳಿ

    ಗೋಮಾಂಸ ಸಾಗಾಟ ಆರೋಪ.. ಬೆಳಗಾವಿಯಲ್ಲಿ ಲಾರಿಗೆ ಬೆಂಕಿ ಹಚ್ಚಿ ಆಕ್ರೋಶ

    ವಿಮಾನದ ಲ್ಯಾಂಡಿಂಗ್ ಗೇರ್ ಬಳಿ ಅಡಗಿ 2 ಗಂಟೆ ಪ್ರಯಾಣಿಸಿ ಭಾರತಕ್ಕೆ ಬಂದ ಅಫ್ಘಾನ್‌ ಬಾಲಕ!

    ಧರ್ಮಸ್ಥಳ ಪ್ರಕರಣ: ತಿಮರೋಡಿ-ಚಿನ್ನಯ್ಯ ಸಂಭಾಷಣೆಯ 8ನೇ ವಿಡಿಯೋ ಬಿಡುಗಡೆ

    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    Breaking: ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ಭಾಷಣ.. ಬಿಗ್​​ ಅನೌನ್ಸ್​ಮೆಂಟ್​ ನಿರೀಕ್ಷೆ

    ಹಿಂದೂ ಕ್ರೈಸ್ತಗೆ ಕೊಕ್ – ಮತಾಂತರ ಆದವರಿಗೆ ಮೂಲ ಜಾತಿ ಅನ್ವಯ ಆಗಲ್ಲ

    ನಾಳೆಯಿಂದಲೇ ಹಿಂದುಳಿದ ಆಯೋಗದಿಂದ ಸಮೀಕ್ಷೆ – 60 ಪ್ರಶ್ನೆಗಳಿಗೆ ಉತ್ತರ ಪಡೆಯಲಿರೋ ಸರ್ವೇಯರ್ಸ್

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ರಾಜ್ಯ

ನಟ ಪುನೀತ್‌ ರಾಜ್‌ಕುಮಾರ್‌ಗೆ ಇಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ

editor tv by editor tv
November 1, 2022
in ರಾಜ್ಯ, ಸುದ್ದಿ
0
ನಟ ಪುನೀತ್‌ ರಾಜ್‌ಕುಮಾರ್‌ಗೆ ಇಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ
1.9k
VIEWS
Share on FacebookShare on TwitterShare on Whatsapp

ಬೆಂಗಳೂರು: ಕರುನಾಡಿನ ರಾಜರತ್ನ ಅಪ್ಪು ಇಂದಿನಿಂದ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ (Puneeth Rajkumar) ಆಗಲಿದ್ದಾರೆ. ರಾಜ್ಯ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿಯನ್ನ ಮರಣೋತ್ತರವಾಗಿ ದಿವಂಗತ ನಟ ಪುನೀತ್ ರಾಜ್‌ಕುಮಾರ್‌ಗೆ ಪ್ರದಾನ ಮಾಡಲಾಗುತ್ತದೆ. ವಿಧಾನಸೌಧದ ಮೆಟ್ಟಿಲುಗಳ ಕಾರ್ಯಕ್ರಮ ನಡೆಯಲಿದ್ದು, ಪುನೀತ್ ಪತ್ನಿ ಅಶ್ವಿನಿ ಅವರು ಪ್ರಶಸ್ತಿಯನ್ನ ಸ್ವೀಕರಿಸಲಿದ್ದಾರೆ.

ಸಂಜೆ 4 ಗಂಟೆಗೆ ಸಮಾರಂಭ ನಡೆಯಲಿದೆ. ಸುಮಾರು 25 ಸಾವಿರ ಮಂದಿ ಭಾಗವಹಿಸುವ ಸಾಧ್ಯತೆ ಇದ್ದು, ಗಣ್ಯರಿಗೆ 5 ಸಾವಿರ ಪಾಸ್‌ಗಳನ್ನು ವಿತರಿಸಲಾಗಿದೆ. ಇನ್ನು ಡಾ.ರಾಜ್ ಕುಟುಂಬಕ್ಕೂ ರಾಜ್ಯ ಸರ್ಕಾರ ಆಹ್ವಾನ ನೀಡಿದೆ. ನಿನ್ನೆ ಅಪ್ಪು ನಿವಾಸಕ್ಕೆ ಭೇಟಿ ನೀಡಿದ ಸಚಿವ ಅಶೋಕ್, ಸುನೀಲ್ ಕುಮಾರ್ ಇಂದಿನ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್‌ರನ್ನು ಆಹ್ವಾನಿಸಿದ್ದಾರೆ. ಡಾ.ರಾಜ್‌ಕುಮಾರ್ ಕುಟುಂಬ ಸದಸ್ಯರು ಬಸ್‌ನಲ್ಲಿ ಒಟ್ಟಿಗೆ ವಿಧಾನಸೌಧಕ್ಕೆ ಬಂದಿಳಿಯಲಿದ್ದಾರೆ. ಇಡೀ ಕುಟುಂಬ ಒಟ್ಟಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ. ಡಾ.ರಾಜ್ ಕುಟುಂಬ ಸದಸ್ಯರು ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರು ಭಾಗಿಯಾಗಲಿದ್ದಾರೆ. ಕರುನಾಡಿನ ರಾಜರತ್ನ’ ಅಪ್ಪುಗೆಕರ್ನಾಟಕ ರತ್ನ’ ಅಭಿಮಾನಿಗಳಲ್ಲಿ ಇನ್ನಿಲ್ಲದ ಸಂಭ್ರಮ ತಂದಿದೆ.

ಅಪ್ಪುಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಮುಖ್ಯ ಅತಿಥಿಯಾಗಿ ಖ್ಯಾತ ನಟರಾದ ಸೂಪರ್ ಸ್ಟಾರ್ ರಜನಿಕಾಂತ್, ಜ್ಯೂ.ಎನ್‌ಟಿಆರ್, ಇನ್ಫೋಸಿಸ್ ಸುಧಾಮೂರ್ತಿ ಭಾಗಿಯಾಗುತ್ತಿರುವುದು ಸಂಭ್ರಮವನ್ನ ಇಮ್ಮಡಿಗೊಳಿಸಿದೆ. ವಿಧಾನಸೌಧದ ಮುಂಭಾಗದಲ್ಲಿ ನಡೆಯುವ ಈ ಸಮಾರಂಭಕ್ಕೆ ರಜನಿಕಾಂತ್ ಹಾಗೂ ಜೂ.ಎನ್‌ಟಿಆರ್ ಆಗಮಿಸಲಿದ್ದಾರೆ. ಇದೇ ರಜನಿಕಾಂತ್ ದಶಕಗಳ ಹಿಂದೆ ಪುನೀತ್ ಅಭಿನಯದ 2002ರಲ್ಲಿ ತೆರೆ ಕಂಡ ಅಪ್ಪು ಚಿತ್ರದ ನೂರನೇ ದಿನ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು. ಈಗ ಇವತ್ತಿನ ಕ್ಷಣಕ್ಕೂ ಸಾಕ್ಷಿಯಾಗಲಿದ್ದಾರೆ. ಅಪ್ಪುಗೆ ಚಕ್ರವ್ಯೂಹ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಹಾಡೊಂದನ್ನ ಹಾಡಿದ್ರು. ಅಪ್ಪು ನಿಧನ ಬಳಿಕ ಅಪ್ಪುವನ್ನ ನೆನೆದು ಗದ್ಗದಿತರಾಗಿದ್ರು. ಇದೀಗ ಗೆಳೆಯನಿಗೆ ಪ್ರಶಸ್ತಿ ಕೊಡಲು ಮುಖ್ಯ ಅತಿಥಿಯಾಗಿ ಜೂನಿಯರ್ ಎನ್‌ಟಿಆರ್ ಬರ್ತಿದ್ದಾರೆ.

ವಿಧಾನಸೌಧದ ಪೂರ್ವದ್ವಾರದ ಗ್ರ್ಯಾಂಡ್ ಸ್ಟೆಪ್ ಮೇಲೆ ಹಂಪಿ ಮಾದರಿಯ ಬೃಹತ್ ಮಂಟಪ ನಿರ್ಮಾಣ ಮಾಡಲಾಗಿದೆ. ಅದ್ದೂರಿ ವೇದಿಕೆ ಸಿದ್ಧಗೊಂಡಿದೆ. ಅವಿಸ್ಮರಣೀಯ ಕಾರ್ಯಕ್ರಮಕ್ಕೆ ನಟ ರಜನಿಕಾಂತ್, ಜೂನಿಯರ್ ಎನ್‌ಟಿಆರ್ ಬರ್ತಿದ್ದಾರೆ. ವೇದಿಕೆ ಮೇಲೆ 30 ವಿವಿಐಪಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ವಿಐಪಿಗಳಿಗೆ ಗ್ರ್ಯಾಂಡ್ ಸ್ಟೆಪ್ ವೇದಿಕೆಯ ಮುಂಭಾಗದಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸುಮಾರು 7000 ವಿಐಪಿ ಪಾಸ್‌ಗಳ ವಿತರಣೆ ಮಾಡಲಾಗಿದ್ದು, ಆಸನಗಳನ್ನ ಹಾಕಲಾಗಿದೆ. ಇನ್ನು ಅಪ್ಪು ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಇನ್ನು ಪೊಲೀಸ್ ಇಲಾಖೆ ಕಾರ್ಯಕ್ರಮದ ಬಂದೋಬಸ್ತ್‌ಗೆ 1,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಿದೆ. ಇವತ್ತಿನ ಕಾರ್ಯಕ್ರಮಕ್ಕೆ ಸಂಚಾರಿ ಪೊಲೀಸರು ಕೂಡ ಸರ್ವ ಸನ್ನದ್ಧರಾಗಿದ್ದು, ಅಂಬೇಡ್ಕರ್ ರೋಡ್ ಸೇರಿದಂತೆ ಹಲವು ರಸ್ತೆ ಮಾರ್ಗಗಳನ್ನ ಬದಲಿಸಿದ್ದಾರೆ.

7,000 ವಿಐಪಿಗಳಿಗೆ ಪಾಸ್ ವಿತರಣೆ
ಚಿತ್ರರಂಗದ ಗಣ್ಯರು, ಸರ್ಕಾರಿ ಅಧಿಕಾರಿಗಳು ಸೇರಿದಂತೆ 7,000 ವಿಐಪಿಗಳಿಗೆ ಪಾಸ್ ವಿತರಣೆ ಮಾಡಲಾಗಿದೆ. ಪಾಸ್ ಇದ್ದರಷ್ಟೆ ವಿಧಾನಸೌಧದ ಒಳಗೆ ಪ್ರವೇಶವಿರುತ್ತದೆ. 20 ರಿಂದ 30 ಸಾವಿರ ಸಾರ್ವಜನಿಕರು ಭಾಗಿಯಾಗುವ ನಿರೀಕ್ಷೆ ಇದೆ. ವೀಕ್ಷಣೆಗಾಗಿ 10 ಕಡೆ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗಿದೆ. ಮೂವರು ಡಿಸಿಪಿ, 10 ಎಸಿಪಿಗಳ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ. ವಿವಿಐಪಿ, ವಿಐಪಿ, ಸಾರ್ವಜನಿಕರಿಗೆ ಮಾರ್ಗ ಪ್ರತ್ಯೇಕವಾಗಿದೆ. ವಿವಿಐಪಿ ವಾಹನಗಳಿಗಷ್ಟೆ ವಿಧಾನಸೌಧದ ಒಳಗೆ ಪ್ರವೇಶ ಇರುತ್ತದೆ.

Previous Post

ಗುಜರಾತ್ ತೂಗುಸೇತುವೆ ದುರಂತ: 2016ರಲ್ಲಿ ಬಂಗಾಳದ ಸೇತುವೆ ಕುಸಿದಿದ್ದಾಗ ಮೋದಿ ಮಾಡಿದ್ದ ಭಾಷಣ ವೈರಲ್

Next Post

ಮೋದಿ ಭೇಟಿ ಮೊದಲು ಮೊರ್ಬಿ ಆಸ್ಪತ್ರೆಗೆ ಸುಣ್ಣ ಬಣ್ಣ; ಫೋಟೋಶೂಟ್ ಗೆ ತಯಾರಿ ಎಂದ ಕಾಂಗ್ರೆಸ್

Next Post
ಮೋದಿ ಭೇಟಿ ಮೊದಲು ಮೊರ್ಬಿ ಆಸ್ಪತ್ರೆಗೆ ಸುಣ್ಣ ಬಣ್ಣ; ಫೋಟೋಶೂಟ್ ಗೆ ತಯಾರಿ ಎಂದ ಕಾಂಗ್ರೆಸ್

ಮೋದಿ ಭೇಟಿ ಮೊದಲು ಮೊರ್ಬಿ ಆಸ್ಪತ್ರೆಗೆ ಸುಣ್ಣ ಬಣ್ಣ; ಫೋಟೋಶೂಟ್ ಗೆ ತಯಾರಿ ಎಂದ ಕಾಂಗ್ರೆಸ್

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.