

ಬಂಟ್ವಾಳ : ಮಜ್ಲಿಸ್ ಗಾಣೆಮಾರ್ ಇದರ ವತಿಯಿಂದ ಪ್ರತಿ ತಿಂಗಳು ನಡೆಯುವ ಬುರ್ದಾ ಮಜ್ಲಿ ಸ್ ನ ಐದ ನೇ ವಾರ್ಷಿಕದ ಪ್ರಚಾರ ಪ್ರಯುಕ್ತ ಮಜ್ಲಿಸ್ ವಿಂಗ್ ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆ ಇದರ ಅಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ ವು ಇತ್ತೀಚೆಗೆ ಇಮಾದ್ ಅಕಾಡೆಮಿ ಬಡಕಬೈಲ್ ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮಜ್ಲಿಸ್ ಸಂಸ್ಥೆ ಯ ಅಧ್ಯಕ್ಷರಾದ ಅಬ್ದುಲ್ ಮಜೀದ್ ಸಖಾಫಿ ಅಲ್ ಫಾಳಿಲ್ ದುವಾ ದೊಂದಿಗೆ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಅಮುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಾಮನ ನಾಯಕ್, ನವಾಝ್ ಬಡಕಬೈಲ್ ಅಧ್ಯಕ್ಷರು ಜುಮಾ ಮಸೀದಿ ಬಡಕಬೈಲ್, ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಪಲ್ಲಿಪ್ಪಾಡಿ,
ಬಶೀರ್ ಗಾಣೆಮಾರ್, ಶಮೀಮ್ ಗಾಣೆಮಾರ್ ಸದಸ್ಯರು ಕರಿಯoಗಳ ಪಂಚಾಯತ್,ಪ್ರಕಾಶ್ ಶೆಟ್ಟಿ ತುಂಬೆ, ಮಹಮೂದ್ ಪಡ್ಡoದಡ್ಕ, ಅಬ್ದುಲ್ ಹಕಿಮ್. ತಾಳಿಪ್ಪಾಡಿ, ಸುಕೇಶ್ ಕುಮಾರ್ ಚೌಟಾ ಬಡಕಬೈಲ್ , ಇಲ್ಯಾಸ್ ಸಹದಿ, ಜಲೀಲ್ ಮೊಗರು, ಶರೀಫ್ ವರಕೋಡಿ, ಮುಹಮ್ಮದ್ ಅಮ್ಮುoಜೆ, ಅಶ್ರಫ್ ಬದ್ರಿಯಾ ನಗರ, ನೌಫಲ್ ಉದ್ದಬೆಟ್ಟು. ಹಮೀದ್ ವರಕೋಡಿ ಸ್ವಾಗತಿಸಿ, ಸದ್ದಾಂ ಮಾಸ್ಟರ್ ಬದ್ಯಾರ್ ಧನ್ಯವಾದ ವಿತ್ತರು.
