

ಉಡುಪಿ :ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಮಾಸಾಚರಣೆ ಪ್ರಯುಕ್ತ ಎಸ್ ವೈ ಎಸ್ ಹಾಗೂ ಎಸ್ ಎಸ್ ಎಫ್ ನ ವತಿಯಿಂದ ರ್ಯಾಲಿಯನ್ನು ಅಕ್ಟೋಬರ್ 21 ಶುಕ್ರವಾರ ಸಂಜೆ ಹಮ್ಮಿಕೊಳ್ಳಲಾಗಿದೆ ಎಂದು ಕಾಪು ಪತ್ರಿಕಾ ಭವನದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘಟಕರು ಹೇಳಿದ್ದಾರೆ.ಮಿಲಾದ್ ರ್ಯಾಲಿಯು ಪೊಲಿಪು ಜುಮ್ಮಾ ಮಸೀದಿಯಿಂದ ಆರಂಭಗೊಂಡು ಕಾಪು ರಾಜಬೀದಿಯಲ್ಲಿ ಹಾದು ಕಾಪು ಪೇಟೆಯಲ್ಲಿ ಸಮಾಪನಗೊಳ್ಳಲಿದೆ. ಸಮಾರೋಪ ಸಮಾರಂಭದಲ್ಲಿ ಕಾಪು ಕಾಜಿ ಅಲ್ ಹ್ಯಾಜ್, ಶೈಕುನ ಪಿ ಬಿ ಅಹ್ಮದ್ ಮುಸ್ಲಿಯ, ನ್ಯಾಯವಾದಿ ಹಂಜತ್ ಹೆಜಾಡಿ, ಎಂಕೆ ಇಬ್ರಾಹಿಂ ಮಜೂರು, ಪೊಲೀಸ್ ವೃತ್ತನಿರೀಕ್ಷಕ ಕೆ ಸಿ ಪೂವಯ್ಯ, ಕಾಪು ಪತ್ರಕರ್ತರ ಸಂಘದ ಅಧ್ಯಕ್ಷ ಸುರೇಶ್ ಎರ್ಮಾಳು, ಮತ್ತಿತರ ಗಣ್ಯರು ಉಪಸ್ಥಿತರಿರುವರು ಎಂದು ತಿಳಿಸಿದರು: ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್ಲಾ ಸೂಪರ್ ಸ್ಟಾರ್, ಹಂಸತ್ ಹೆಜಾಡಿ, ಎಂಕೆ ಅಬ್ದುಲ್ ರಶೀದಸ ಕಾಮಿಲ್ ಸಖಾಫಿ, ಮಹಿಯುದ್ದೀನ್ ಹಾಜಿ, ಎಂಕೆ ಇಬ್ರಾಹಿಂ ಮಜೂರು, ಎಕೆ ಸಯ್ಯದ್ ಅಲಿ ಪಡುಬಿದ್ರಿ ಉಪಸ್ಥಿತರಿದ್ದರು.