

ಮುಂಬೈ: ಇಲ್ಲಿನ ಅಂತರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ಮುಂದುವರೆದಿದ್ದು, ಬುಧವಾರ 61 ಪೈಸೆಗಳಷ್ಟು ಭಾರೀ ಕುಸಿತ ಕಂಡು 83.01 ರೂ.ನಲ್ಲಿ ಮುಕ್ತಾಯವಾಗಿದೆ. ಡಾಲರ್ ಎದುರು ರುಪಾಯಿ ಮೌಲ್ಯ 83 ರುಪಾಯಿಗಳ ಗಡಿದಾಟಿದ್ದು ಇದೇ ಮೊದಲು.
ಭಾರತೀಯ ಷೇರುಪೇಟೆಯಿಂದ (Indian Share Market) ವಿದೇಶಿ ಸಾಂಸ್ಥಿಕೆ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಹಣ ಹಿಂಪಡೆಯುತ್ತಿರುವುದು ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ ರುಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಇದರ ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿ (Global Market) ಕಚ್ಚಾತೈಲ (Crude Oil)ಬೆಲೆ ಏರುತ್ತಿರುವುದು, ಸ್ಥಳೀಯ ಕರೆನ್ಸಿಯಲ್ಲಿ ಹೂಡಿಕೆ ಮಾಡಲು ವಿದೇಶಿ ಹೂಡಿಕೆದಾರರು ಹಿಂಜರಿಯುತ್ತಿರುವುದು ಕೂಡಾ ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ.