

ಹೈದರಾಬಾದ್(ಅ.14): ಹಿಜಾಬ್ ಪ್ರಕರಣ ಕುರಿತು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಭಿನ್ನ ತೀರ್ಪು ನೀಡಿದೆ. ಇದೀಗ ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ. ಇದರ ಬೆನ್ನಲ್ಲೇ AIMIM ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಮತ್ತೆ ಹಿಜಾಬ್ ಪರ ಬ್ಯಾಟ್ ಬೀಸಿದ್ದಾರೆ. ಇದೇ ವೇಳೆ ಮುಸ್ಲಿಮ್ ಹೆಣ್ಣುಮಕ್ಕಳ ಹಿಜಾಬ್ ತೆಗೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಮುಸ್ಲಿಮ್ ಹೆಣ್ಣುಮುಕ್ಕಳು ಹಿಜಾಬ್ ಧರಿಸಲು ಇಚ್ಚಿಸುತ್ತಿದ್ದಾರೆ. ಹಿಜಾಬ್ ಧರಿಸಿದ್ದಾರೆ ಎಂದರೆ ಅವರ ಬುದ್ಧಿಶಕ್ತಿಯನ್ನು ಮುಚ್ಚುತ್ತಿದ್ದಾರೆ ಎಂದರ್ಥವಲ್ಲ. ಮುಸ್ಲಿಮ್ ಹೆಣ್ಣುಮಕ್ಕಳಿಗೆ ಹಿಜಾಬ್ ಧರಿಸಲು ಯಾರೂ ಒತ್ತಾಯ ಮಾಡುತ್ತಿಲ್ಲ. ಅವರ ಇಚ್ಚೆ ಅದು. ನೀವು ಬಿಕಿನಿ ಬೇಕಾದರೆ ಹಾಕಿಕೊಳ್ಳಿ, ಆದರೆ ನಮ್ಮ ಮುಸ್ಲಿಮ್ ಹೆಣ್ಣುಮಕ್ಕಳು ಹಿಜಾಬ್ ಧರಿಸುತ್ತಾರೆ ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಹಿಜಾಬ್(Hijab) ಧರಿಸುವಿಕೆಯಿಂದ ಮುಸ್ಲಿಮ್ ಮಹಿಳೆಯರು(Muslim Women) ಹಿಂದುಳಿಯುತ್ತಿದ್ದಾರೆ ಅನ್ನೋ ವಾದವನ್ನು ಒವೈಸಿ ತಳ್ಳಿ ಹಾಕಿದ್ದಾರೆ. ದೇಶ ಅಭಿವೃದ್ಧಿಯಲ್ಲಿ ಮುಸ್ಲಿಮ್ ಹೆಣ್ಣುಮಕ್ಕಳ ಕೊಡುಗೆಯೂ ಅಪಾರವಾಗಿದೆ. ಹೈದರಾಬಾದ್ನಲ್ಲಿ(Hyderabad) ಹಲವು ಮಹಿಳೆಯರು ಡ್ರೈವರ್ ಆಗಿ ವಾಹನ ಚಲಾಯಿಸುತ್ತಿದ್ದಾರೆ. ಅವರಿಗೆ ಯಾರೂ ಹಿಜಾಬ್ ಒತ್ತಾಯಪೂರ್ವಕವಾಗಿ ಹಾಕುತ್ತಿಲ್ಲ. ಅವರ ಆಯ್ಕೆಯಾಗಿದೆ ಎಂದು ಓವೈಸಿ ಹೇಳಿದ್ದಾರೆ.
ಹಿಂದೂ ಸಿಖ್, ಕ್ರಿಶ್ಚಿಯನ್ ಮಕ್ಕಳು ತಮ್ಮ ಧರ್ಮದ ಉಡುಪು ಧರಿಸಿ ಶಾಲೆಗೆ ತೆರಳಲು ಅನುಮತಿ ಇದೆ. ಆದರೆ ಮುಸ್ಲಿಮ್ ಹೆಣ್ಣುಮಕ್ಕಳಿಗೆ ನಿರಾಕರಿಸಲಾಗುತ್ತಿದೆ. ಈ ತಾರತಮ್ಯ ಯಾಕೆ? ಒಂದು ದಿನ ಹಿಜಾಬ್ ಧರಿಸಿದ ಮುಸ್ಲಿಮ್ ಮಹಿಳೆ ಭಾರತದ ಪ್ರಧಾನಿಯಾಗುತ್ತಾರೆ. ಇದು ನನ್ನ ಕನಸು ಎಂದು ಓವೈಸಿ(Asaduddin Owaisi) ಹೇಳಿದ್ದಾರೆ.
Hayath TV ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8861948115 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…