

ತುಮಕೂರು: ಇತಿಹಾಸ ನೋಡಿದರೆ ಬಿಜೆಪಿ (BJP), ಆರ್‌ಎಸ್‌ಎಸ್ (RSS) ಎಲ್ಲಿಯೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯೇ ಆಗಿಲ್ಲ. ಆರ್‌ಎಸ್‌ಎಸ್ ಬ್ರಿಟಿಷರಿಗೆ (British) ಸಹಾಯ ಮಾಡ್ತಾ ಇತ್ತು. ಸಾವರ್ಕರ್ (Savarkar) ಸ್ಟೈಫಂಡ್ ಪಡೆದುಕೊಳ್ಳುತ್ತಿದ್ದರು. ಭಾರತವನ್ನು (India) ಒಡೆಯುತ್ತಿರುವುದು ಆರ್‌ಎಸ್‌ಎಸ್ ಮತ್ತು ಬಿಜೆಪಿ. ಲಕ್ಷಾಂತರ ಮಂದಿ ಭಾರತ್ ಜೋಡೋ ಯಾತ್ರೆ (Bharat Jodo Yatra) ಮಾಡ್ತಾ ಇದ್ದಾರೆ. ನಾವು ದ್ವೇಷ ಹರಡುವ ಎಲ್ಲರ ವಿರುದ್ಧವೂ ಹೋರಾಡುತ್ತೇವೆ ಎಂದು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತುರುವೇಕೆರೆಯ ಅರಳಿಕೆರೆ ಪಾಳ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿಲ್ಲ. ಪತ್ರಕರ್ತರು ಪ್ರಶ್ನೆ ಕೇಳಲು ಅವಕಾಶವೇ ಇಲ್ಲ. ಇಲ್ಲಿಯವರೆಗೆ ಒಂದೇ ಒಂದು ಸುದ್ದಿಗೋಷ್ಠಿ ಮೋದಿ (Narendra Modi) ಮಾಡಿಲ್ಲ. ಆದ್ರೆ ಕಾಂಗ್ರೆಸ್ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದೆ. ಹಾಗಾಗಿ ಈ ಸುದ್ದಿಗೋಷ್ಠಿಗೆ ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಕಕಿಡಿಕರಿದ್ದಾರೆ.

ಕರ್ನಾಟಕದಲ್ಲಿ (Karnataka) ಮುಂದಿನ ಸಿಎಂ ಯಾರು ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಒಂದು ತಂಡವಾಗಿದ್ದೇವೆ. ಕರ್ನಾಟಕದಲ್ಲಿ ಉತ್ತಮ ನಾಯಕರಿದ್ದಾರೆ. ಚುನಾವಣೆ ಗೆದ್ದ ಮೇಲೆ ಮುಂದಿನ ಸಿಎಂ ಬಗ್ಗೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ. ಈ ಪ್ರಶ್ನೆ ಈಗಲೇ ಉದ್ಭವಿಸಲ್ಲ. ಈಗ ಈ ಪ್ರಶ್ನೆ ನಮ್ಮ ಪಕ್ಷದ ವ್ಯವಸ್ಥೆಯಲ್ಲಿ ಗೊಂದಲ ಸೃಷ್ಟಿಸಬಹುದು. ಹೀಗಾಗಿ ಪಕ್ಷದ ಪದ್ಧತಿಯಂತೆ ಪಕ್ಷ ಗೆದ್ದ ಬಳಿಕ ನಿರ್ಧಾರ ಮಾಡಲಾಗುತ್ತದೆ. ನಮ್ಮಲ್ಲಿ ನಾಯಕರ ಕೊರತೆ ಇಲ್ಲ. ಬುದ್ಧಿವಂತ ನಾಯಕರು ನಮ್ಮಲ್ಲಿ ಇದ್ದಾರೆ ಎಂದರು.