

ಮಂಗಳೂರು: ಇಸ್ಲಾಂನ ಕೊನೆಯ ಪ್ರವಾದಿ ಹಜರತ್ ಮುಹಮ್ಮದ್ ಜನಿಸಿದ ದಿನದ ಅಂಗವಾಗಿ ಅಕ್ಟೋಬರ್ 9ರಂದು ಮುಸ್ಲೀಮರು ಈದ್ ಮಿಲಾದ್ ಹಬ್ಬವನ್ನು ಆಚರಿಸುತ್ತಾರೆ. ಹಬ್ಬದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲದ ಸಂದೀಪ್ ಉನ್ನಿಕೃಷ್ಣನ್ ವೃತ್ತಕ್ಕೆ ಹಸಿರು ಬಟ್ಟೆ ಹೊದಿಸಿ ತಯಾರಿ ಮಾಡಿಕೊಳ್ಳಲಾಗಿದೆ.
ಈದ್ ಮಿಲಾದ್ ಹಬ್ಬದ ಹಿನ್ನೆಲೆ ವೀರ ಸೈನಿಕನ ಹೆಸರಿನ ವೃತ್ತಕ್ಕೆ ಹಸಿರು ಬಟ್ಟೆ ಮತ್ತು ಹಸಿರು ಬಾವುಟ ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಹಸಿರು ಬಟ್ಟೆ ತೆಗೆಯಲು ಹಿಂದೂ ಪರ ಸಂಘಟನೆಗಳು ಆಗ್ರಹಿಸಿವೆ. ಅಧಿಕಾರಿಗಳು ತಕ್ಷಣ ಪರಿಸ್ಥಿತಿ ಗಂಭೀರತೆ ಅರಿತು ಹಸಿರು ಬಟ್ಟೆ ತೆರವು ಮಾಡಿದ್ದಾರೆ. ಸದ್ಯ ಹಸಿರು ಬಟ್ಟೆ ತೆರವು ಮಾಡಿ ಪೊಲೀಸರು ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಸಂಪ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.