

ದೆಹಲಿ: ಕೆಲವು ದಿನಗಳಿಂದ ಕಾಣೆಯಾಗಿದ್ದ ಎಂಟು ತಿಂಗಳ ಮಗು ಸೇರಿದಂತೆ ಅಮೆರಿಕದಲ್ಲಿರುವ ಭಾರತೀಯ ಮೂಲದ ಕುಟುಂಬದ ನಾಲ್ವರು ಕ್ಯಾಲಿಫೋರ್ನಿಯಾದ ಹಣ್ಣಿನ ತೋಟದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಸೋಮವಾರ ಉತ್ತರ ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯಿಂದ 8 ತಿಂಗಳ ಮಗು ಅರೂಹಿ ಧೇರಿ ಮತ್ತು ಆಕೆಯ ಪೋಷಕರು 27 ವರ್ಷದ ಜಸ್ಲೀನ್ ಕೌರ್ ಮತ್ತು 36 ವರ್ಷದ ಜಸ್ದೀಪ್ ಸಿಂಗ್ ಅವರನ್ನು ಅಪಹರಿಸಲಾಗಿತ್ತು. ಮರ್ಸಿಡ್ ಕೌಂಟಿ ಪೋಲೀಸರ ಪ್ರಕಾರ ಮಗುವಿನ ಚಿಕ್ಕಪ್ಪ, 39 ವರ್ಷದ ಅಮನದೀಪ್ ಸಿಂಗ್ ಕೂಡ ಅಪಹರಿಸಿದ್ದಾರೆ.
ಮರ್ಸಿಡ್ ಕೌಂಟಿ ಶೆರಿಫ್ ವೆರ್ನ್ ವಾರ್ನ್ಕೆ ಅವರು ನಾಲ್ವರ ಶವಗಳು ಇಂಡಿಯಾನಾ ರಸ್ತೆ ಮತ್ತು ಹಚಿನ್ಸನ್ ರಸ್ತೆ ಬಳಿಯ ಹಣ್ಣಿನ ತೋಟದಲ್ಲಿ ಬುಧವಾರ ಸಂಜೆ ಪತ್ತೆಯಾಗಿವೆ. ಪೊಲೀಸರ ಪ್ರಕಾರ, ಅಧಿಕಾರಿಗಳನ್ನು ಸಂಪರ್ಕಿಸುವ ಮೊದಲು ತೋಟದ ಬಳಿಯ ರೈತ ಕಾರ್ಮಿಕರು ಶವಗಳನ್ನು ಪತ್ತೆ ಮಾಡಿದ್ದಾರೆ. ಈ ಕುಟುಂಬವನ್ನು ಅಪಹರಿಸಿದ ಒಂದು ದಿನದ ನಂತರ, ಪೊಲೀಸರು ಶಂಕಿತ ಅಪಹರಣಕಾರನನ್ನು ಪತ್ತೆ ಮಾಡಿ. 48 ವರ್ಷದ ಜೀಸಸ್ ಮ್ಯಾನುಯೆಲ್ ಸಲ್ಗಾಡೊನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ವಿಚಾರಣೆ ವೇಳೆ ಜಸ್ದೀಪ್ ಸಿಂಗ್ ಕುಟುಂಬದ ಮೇಲೆ ಈ ವ್ಯಕ್ತಿಗೆ ದ್ವೇಷವಿದೆ ಎಂದು ಹೇಳಲಾಗಿದೆ.
ಕ್ಯಾಲಿಫೋರ್ನಿಯಾದ ಮರ್ಸೆಡ್ ಸಿಟಿಯಲ್ಲಿ ಭಾರತೀಯ ಮೂಲದ ನಾಲ್ವರನ್ನು ಸೋಮವಾರ ಕಿಡ್ನ್ಯಾಪ್ ಮಾಡಲಾಗಿದೆ. ಇದರಲ್ಲಿ 8 ತಿಂಗಳ ಹೆಣ್ಣು ಮಗುವೂ ಸೇರಿದೆ. ಜಶ್ದೀಪ್ ಸಿಂಗ್ ಹಾಗೂ ಪತ್ನಿ ಜಸ್ಲೀನ್ ಕೌರ್ ಮತ್ತು ಆಕೆಯ ಎಂಟು ತಿಂಗಳ ಮಗಳು ಅರೋಹಿ ಧೇರಿ, ಅಮನ್ದೀಪ್ ಸಿಂಗ್ ಸೇರಿ ನಾಲ್ವರ ಅಪಹರಣ ಆಗಿದೆ. ಇನ್ನು ಕಿಡ್ನ್ಯಾಪ್ ಮಾಡಿದವರು ಅತ್ಯಂತ ಅಪಾಯಕಾರಿ ಮತ್ತು ಶಸ್ತ್ರಸಜ್ಜಿತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.