

ಮಂಗಳೂರು: ಸನ್ನದ್ದ ಸೇವೆಗೆ ಯುವ ಜಾಗೃತಿ ಎಂಬ ಘೋಷ ವಾಕ್ಯದೊಂದಿಗೆ ಸನ್ನದ್ದ ಸೇವೆ ನೀಡುತ್ತಿರುವ SKSSF ವಿಖಾಯ. SKSSF ವಿಖಾಯ ದ.ಕ ಜಿಲ್ಲಾ ವೆಸ್ಟ್ ಸಮಿತಿ ವತಿಯಿಂದ ಮಾದಕ ವ್ಯಸನದ ವಿರುದ್ಧ ಜನಜಾಗೃತಿ ಅಭಿಯಾನದ ಅಂಗವಾಗಿ ಇಂದು ಮದ್ಯಾಹ್ನ 2: 30 ಗಂಟೆಗೆ ಜ್ಯೋತಿ ವೃತದಿಂದ ಕ್ಲಕ್ ಟವರ್ ವರೆಗೆ ಕಾಲ್ನಡಿಗೆ ಜಾಥಾ ನಡೆಯಲಿದೆ ಕಾರ್ಯಕ್ರಮ ವನ್ನು SKSSF ದ.ಕ ಜಿಲ್ಲಾ ವೆಸ್ಟ್ ಅಧ್ಯಕ್ಷ ರಾದ ಬಹು: ಸಯ್ಯದ್ ಅಮೀರ್ ತಂಗಳ್ ಉದ್ಘಾಟಿಸಲಿದ್ದು ಬಹು:ಉಸ್ತಾದ್ ನಹಿಂ ಫೈಝಿ ಸಂದೇಶ ಭಾಷಣ ನಡೆಸಲಿದ್ದಾರೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ,ಜಿಲ್ಲಾ ಕಾರ್ಯದರ್ಶಿ ಸಿದ್ದೀಕ್ ಅಬ್ದುಲ್ ಖಾದರ್, SKSSF ಕರ್ನಾಟಕ ರಾಜ್ಯ ಕಾರ್ಯಾಧ್ಯಕ್ಷ ಖಾಸಿಂ ದಾರಿಮಿ. ಇರ್ಷಾದ್ ದಾರಿಮಿ ಮಿತ್ತಬೈಲ್ ಸೇರಿದಂತೆ ಸಾಮಾಜಿಕ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು SKSSF ವೆಸ್ಟ್ ಜಿಲ್ಲಾ ವಿಖಾಯ ಚೈರ್ಮೆನ್ ಸಮೀರ್ ಎಚ್ ಕಲ್ ರವರು ಪತ್ರಿಕಾ ಹೇಳಿಕೆ ನೀಡಿದ್ದಾರೆ