

ಶಿವಮೊಗ್ಗ: ಆರ್ ಎಸ್ಎಸ್ ಬ್ಯಾನ್ ಮಾಡಲು ನೆಹರು, ಇಂದಿರಾ ಗಾಂಧಿ, ಸೋನಿಯಾ ಗಾಂಧಿಯ ಕೈಯಲ್ಲೇ ಆಗಿಲ್ಲ. ಅವರೆಲ್ಲಾ ಪ್ರಯತ್ನ ಮಾಡಿದರೂ ಆರ್ ಎಸ್ಎಸ್ ನ ಒಂದು ಕೂದಲೂ ಅಲ್ಲಾಡಿಸಲಾಗಿಲ್ಲ. ಮೂರು ಬಾರಿ ಬ್ಯಾನ್ ಆದ ಆರ್ ಎಸ್ಎಸ್ ಬ್ಯಾನ್ ಮಾಡಲು ಕಾಂಗ್ರೆಸ್ ನ ಯಾವ ಹುಳಕ್ಕೂ ಆಗುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗುಡುಗಿದರು.
ನಮ್ಮ ರಾಜ್ಯಾಧ್ಯಕ್ಷರಿಗೆ ವಿದೂಷಕನೆಂದು ಕರೆಯುತ್ತಾರೆ. ಆದರೆ, ಇದೇ ಸಿದ್ದರಾಮಯ್ಯ ಇಂದು ಕಾಂಗ್ರೆಸ್ ಪಕ್ಷಕ್ಕೆ ವಿಲನ್ ಆಗಿದ್ದಾರೆ. ಪಕ್ಷ ಮಾತ್ರವಲ್ಲದೇ ರಾಜ್ಯ ಹಾಗೂ ದೇಶಕ್ಕೂ ಸಿದ್ದರಾಮಯ್ಯ ವಿಲನ್. ಕಟೀಲು ವಿದೂಷಕ ಅಲ್ಲ ನಮ್ಮ ಪಕ್ಷವನ್ನು ಕಟ್ಟುತ್ತಿರುವ ನೇತಾರ ಅವರು. ಡಿ.ಕೆ.ಶಿವಕುಮಾರ್ ಗೂ ಸಿದ್ದು ಕೂಡ ವಿಲನ್ ಆಗಿದ್ದಾರೆ. ಆರ್ ಎಸ್ ಎಸ್ ಹಿಂದೂಗಳನ್ನು ಸಂಘಟನೆ ಮಾಡುತ್ತಿದೆ. ಸಿದ್ದರಾಮಯ್ಯ ಹಿಂದೂಗಳು ಓಟು ಬೇಡ ಎಂದು ಹೇಳಲಿ ನೋಡೋಣ. ಬರೀ ಮುಸ್ಲಿಂ ಓಟ್ ನಲ್ಲೇ ನಾನು ಇರುತ್ತೇನೆಂದು ಹೇಳಲಿ. ರಾಷ್ಟ್ರಭಕ್ತ ಮುಸಲ್ಮಾನರು ಕೂಡ ಸಿದ್ದರಾಮಯ್ಯ ಮಾತು ಒಪ್ಪಲ್ಲ. ಅನೇಕ ಮುಸಲ್ಮಾನರು ಕೂಡ ಆರ್ಎಸ್ ಎಸ್ ಕಚೇರಿ, ಶಾಖೆಗೆ ಬರ್ತಾರೆ. ರಾಷ್ಟ್ರದ್ರೋಹಿಗಳು ಪಿಎಫ್ಐ ಜೊತೆ ಹೋಗುತ್ತಾರೆ ಎಂದು ಹೇಳಿದರು.