

ಯಾವುದೇ ಪ್ರಚಾರವಿಲ್ಲದೆ ಸಮಾಜ ಸೇವೆಯಲ್ಲಿ ತೊಡಗಿದೆ ಎಂ ಎನ್ ಜಿ ಫೌಂಡೇಶನ್ (ರಿ) ಸಂಸ್ಥೆ
ಹೌದು ಇತ್ತೀಚಿನ ದಿನಗಳಲ್ಲಿ ಸಮಾಜಸೇವೆ ಕ್ರೌಡ್ ಫಂಡಿಂಗ್ ಎಂಬಿತ್ಯಾದಿ ಎಂದು ಹಲವಾರು ಸಂಘ-ಸಂಸ್ಥೆಗಳು, ಹುಟ್ಟಿಕೊಂಡಿದೆ. ಆದರೆ ಕೆಲವೊಂದು ಸಂಸ್ಥೆ ಹೆಸರಿಗಾಗಿ, ಪ್ರತಿಷ್ಠೆಗಾಗಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೇವಲ ಹಣ ಗಳಿಸುವುದಕ್ಕಾಗಿ ಮಾಡುವ ಸೇವೆಯಾಗಿದೆ. ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಅರ್ಹ ವ್ಯಕ್ತಿಗಳಿಗೆ ತಲುಪುತ್ತದೋ, ಇಲ್ಲವೆಂಬುದು ಎರಡನೆಯದ್ದು. ಆದರೆ ಇವೆಲ್ಲಕ್ಕೂ ಮೀರಿ ಯಾವುದೇ ಪ್ರಚಾರವನ್ನೂ ಬಯಸದೆ ಸರ್ವಧರ್ಮದವರಿಗೂ ವಿವಿಧ ರೀತಿಯಲ್ಲಿ ಸೇವೆ ಮಾಡುತ್ತಾ ಬಂದಿರುವ ಸಂಸ್ಥೆಯಾಗಿದೆ ಎಂ ಎನ್ ಜಿ ಫೌಂಡೇಶನ್.
ಹಲವು ವರ್ಷಗಳಿಂದ ಬಡ ಹೆಣ್ಣುಮಕ್ಕಳ ಮದುವೆಗೆ, ಆರೋಗ್ಯ ಸೇವೆ, ಮನೆ ನಿರ್ಮಾಣಕ್ಕೆ, ಮಸೀದಿ ನಿರ್ಮಾಣ, ಶಿಕ್ಷಣಕ್ಕೆ, ಬಡವರಿಗೂ ಮಧ್ಯಮ ವರ್ಗದವರಿಗೆ ಸಹಾಯ ಮಾಡುತ್ತಾ ಬಂದಿರುವ ಸಂಸ್ಥೆಯಾಗಿದೆ.

ಕೆಲವು ವರ್ಷಗಳ ಹಿಂದೆ
ಇಲ್ಯಾಸ್ ಮಂಗಳೂರು ಎನ್ನುವ ಯುವಕ ಕೇವಲ ಸಾಮಾಜಿಕ ಜಾಲತಾಣದಲ್ಲಿ ಬರವಣಿಗೆ ಮೂಲಕ ಮಾತ್ರ ಸೀಮಿತವಾಗಿದ್ದ ಇವರು ಸಣ್ಣ ಪ್ರಾಯದಲ್ಲೇ ಸಮಾಜಕ್ಕೆ ಒಂದು ಸೇವೆಯನ್ನು ಮಾಡಬೇಕು ಎಂದು ಯೋಚನೆ ಮಾಡಿ ವಿವಿಧ ರೀತಿಯ ಯೋಜನೆಯನ್ನು ಹಾಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಸಹಾಯಕ್ಕಾಗಿ ಒಂದು ಕ್ರೌಡ್ ಫಂಡಿಂಗ್ ಯೋಜನೆಯನ್ನು ಪ್ರಾರಂಭ ಮಾಡಿರುವಂತಹ ಎಂ ಎನ್ ಜಿ ಫೌಂಡೇಶನ್ ಸಂಸ್ಥೆಯ ಸ್ಥಾಪಕರು.
ದಾನಿಗಳ ಸಹಕಾರದಿಂದ ಅಲ್ಪ ಸಮಯದಲ್ಲಿ ಬಹಳಷ್ಟು ಮಂದಿಗೆ ವಿವಿಧ ರೀತಿಯ ಸಹಾಯ ಸಹಕಾರವನ್ನು ಮಾಡಿ ಎಲ್ಲರ ಮನಗೆದ್ದಿದ್ದಾರೆ.
ಇತ್ತೀಚಿಗೆ ರಾತ್ರಿ ಬೆಳಗಾಗುವುದರೊಳಗೆ ಹಲವು ಬಡ ಕುಟುಂಬಗಳಿಗೆ ಅತಿ ಹೆಚ್ಚು ಸಹಾಯವನ್ನು ಸಂಗ್ರಹಿಸಿ ಫಲಾನುಭವಿಗೆ ನೀಡಿರುವುದು ಪ್ರಶಂಸೆಗೆ ಪಾತ್ರವಾಗಿದೆ. ಇನ್ನೂ ಕೇವಲ ಜಿಲ್ಲೆಯಲ್ಲದೆ ರಾಜ್ಯ ಹಾಗೂ ಹೊರ ರಾಜ್ಯಗಳಿಗೂ MNG ಫೌಂಡೇಶನ್ ನ ಸೇವೆ ಇತ್ತೀಚಿಗೆ ತಿಳಿದಿದೆ. ಹೇಗೆ ಗೊತ್ತಾ, ಕೆಲ ದಿನಗಳ ಹಿಂದೆ ತಮಿಳುನಾಡು ಮೂಲದ ಸೇಲಂ ನಿವಾಸಿಯೊಬ್ಬರನ್ನು ಕೆಲಸಕ್ಕೆ ಎಂದು ಕರೆದುಕೊಂಡು ಬಂದ ಮಾಲಕ ಧರ್ಮಸ್ಥಳದಲ್ಲಿ ಬಿಟ್ಟು ಹೋಗಿದ್ದರು.
ಹೇಗೋ ಅಲ್ಲಿಂದ ಬಿ.ಸಿ. ರೋಡ್ ತಲುಪಿದ ಆ ವ್ಯಕ್ತಿ ಒಂದು ಶುಕ್ರವಾರ ಮಿತ್ತಬೈಲ್ ಗೆ ತಲುಪುತ್ತಾರೆ. ನಂತರ ಅಲ್ಲಿರುವ ವ್ಯಕ್ತಿಯೊಬ್ಬರಲ್ಲಿ ತಮ್ಮ ಸಮಸ್ಯೆ ಹೇಳಿ ಕೊಂಡಿದ್ದರು. ಈ ರೀತಿಯ ಕಷ್ಟ ಹೇಳಿಕೊಂಡು ಪ್ರತಿದಿನ ಎಷ್ಟೋ ಮಂದಿ ಬರುತ್ತಾರೆ ಎಂದು ಎಲ್ಲರೂ ಸುಮ್ಮನಾಗಿದ್ದರು. ಆದರೆ ಈ ವ್ಯಕ್ತಿ ಯಾರಲ್ಲೂ ಹಣ ಕೇಳುತ್ತಿಲ್ಲ, ಅರ್ಥವಾಗದ ಭಾಷೆಯಲ್ಲಿ ಏನೂ ಹೇಳುತ್ತಿದ್ದರು. ಆದರೆ ಮಾಹಿತಿ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಎಂ ಜೆ ಎಂ ಮಿತ್ತಬೈಲ್ ಮಸೀದಿ ಇದರ ಜೊತೆ ಕಾರ್ಯದರ್ಶಿ ಅಶ್ರಫ್ ಶಾಂತಿಅಂಗಡಿ, ಉಪಾಧ್ಯಕ್ಷರಾದ ಅಬ್ದುಲ್ ರಹೀಮಾನ್, ಹಾಗೂ ಅವರ ಮಗ ಅಬ್ದುಲ್ ರಾಝಿಕ್ ಇವರು MNG ಫೌಂಡೇಶನ್ ಸಂಸ್ಥೆಯ ಕಾರ್ಯನಿರ್ವಾಹಕರಾದ ಮನ್ಸೂರ್ ಮಜಲು, ರಫೀಕ್ ಪರ್ಲಿಯ ಅವರಿಗೆ ಮಾಹಿತಿ ನೀಡಿದರು. ಅದರಂತೆ ಇವರು ವ್ಯಕ್ತಿಯ ಬಗ್ಗೆ ಹಾಗೂ ತಮಿಳುನಾಡುವಿನಲ್ಲಿ ವಿಚಾರಿಸಿದಾಗ ಆ ವ್ಯಕ್ತಿಗೆ ಯಾರಿಂದಾನೋ ಮೋಸ ಆಗಿರುವುದು ಸತ್ಯ ಎಂದು ತಿಳಿಯುತ್ತದೆ. ಅದರಂತೆ ಅವರಿಗೆ ಊರಿಗೆ ಹೋಗಲು ರೈಲು ಟಿಕೆಟ್ ಮಾಡಿ ರೈಲು ಹತ್ತಿಸಿ ಬಂದಿದ್ದರು. ಆ ವ್ಯಕ್ತಿ ಊರಿಗೆ ತಲುಪಿ ಕರ್ನಾಟಕದ ಮಂಗಳೂರು, ಬಿ. ಸಿ ರೋಡ್ ನಲ್ಲಿ ನಡೆದ ಈ ಘಟನೆಯನ್ನು ವಿವರಿಸುತ್ತಾರೆ.
ತಮಿಳುನಾಡು ಸೇಲಂ ಸಮಾಜ ಸೇವಕರು ಆ ವ್ಯಕ್ತಿಗೆ ಮೋಸ ಮಾಡಿದ ಮಾಲಕನ ಮನೆಗೆ ತೆರಳಿ ನ್ಯಾಯ ಒದಗಿಸಿ ಕೊಟ್ಟಿದ್ದಾರೆ.
ಈ ಒಂದು ಸಣ್ಣ ಸೇವೆಯನ್ನು MNG ಫೌಂಡೇಶನ್ ಮಾಡಿರುವುದು ನಮ್ಮ ಮಿತ್ತಬೈಲ್ ಜಮಾತ್ ಗೆ, ದ ಕ ಜಿಲ್ಲೆ ಹಾಗೂ ರಾಜ್ಯಕ್ಕೂ ಒಂದು ಮಾದರಿಯಾಯಿತು.
📲🖊️ ಹಂಝ ಟಿ. ಹೆಚ್. ತಾಳಿಪ್ಪಾಡಿ