
ರಾಯಚೂರು: ದೇಶಾದ್ಯಂತ ಪಿಎಫ್ಐ (PFI) ಕಚೇರಿಗಳ ಮೇಲೆ ಎನ್ಐಎ(NIA) ದಾಳಿ ಪ್ರಕರಣಕ್ಕೆ ಸಂಬಂಧಿಸಿ ರಾಯಚೂರಿನಲ್ಲಿ ನಡೆದ ಉಘೆ ಕಲ್ಯಾಣ ಕರ್ನಾಟಕ ಕಾರ್ಯಕ್ರಮದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ(Chakravarti Sulibele) ಪ್ರತಿಕ್ರಿಯೆ ನೀಡಿದ್ದಾರೆ. ಹಾಗೂ ನಮಗೆ ಗೊತ್ತಿಲ್ಲದ ರೀತಿ ನಮ್ಮ ಸುತ್ತಲೂ ಷಡ್ಯಂತ್ರ ನಡೀತಿದೆ ಎಂದು ಪಿಎಫ್ಐ ಸಂಘಟನೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ಮುಸ್ಲೀಂ ಸಮುದಾಯದ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಇತಿಹಾಸದ ಬಗ್ಗೆ ವಿವರಿಸುವ ವೇಳೆ ಒಂದು ಸಮುದಾಯದ ವಿರುದ್ಧ ಸೂಲಿಬೆಲೆ ವ್ಯಂಗ್ಯವಾಡಿದ್ದಾರೆ. ಸುಮ್ಮನಿರೊ ಮುಸಲ್ಮಾನರನ್ನ ಕಂಟ್ರೋಲ್ ಮಾಡೋದೇ ಕಷ್ಟ. ಅಂಥದ್ರಲ್ಲಿ ಕೈಯಲ್ಲಿ ಶಸ್ತ್ರ ಇರೋ ಮುಸಲ್ಮಾನರನ್ನ ತಡಿಯಲಿಕ್ಕೆ ಆಗುತ್ತಾ? ಎಂದು ಮುಸ್ಲಿಂ ಸಮುದಾಯವನ್ನು ವ್ಯಂಗ್ಯವಾಡಿದ್ದಾರೆ.