

ಮಾಸ್ಕೋ/ನವದೆಹಲಿ: G-7 ರಾಷ್ಟ್ರಗಳು (G7 Countries) ಪ್ರಸ್ತಾಪಿರುವ ಬೆಲೆಯ (Price) ಮಿತಿ ನ್ಯಾಯುತವಾಗಿಲ್ಲದೇ ಇದ್ದರೇ ಜಾಗತಿಕ ಮಾರುಕಟ್ಟೆಗೆ (Global Market) ತೈಲ ಪೂರೈಕೆಯನ್ನು ನಿಲ್ಲಿಸಲಾಗುವುದೆಂದು ರಷ್ಯಾ (Russia) ಹೇಳಿದೆ.
ಈ ಕುರಿತು ಭಾರತದಲ್ಲಿರುವ ರಷ್ಯಾದ ರಾಯಭಾರಿ (Russia’s Ambassador) ಡೆನಿಸ್ ಅಲಿಪೋವ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಅಲ್ಲದೇ ಈಚೆಗೆ ಸಮರ್‌ಕಂಡ್‌ನಲ್ಲಿ ನಡೆದ ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) `ಇದು ಯುದ್ಧದ ಯುಗವಲ್ಲ’ ಎಂದು ರಷ್ಯಾ ಅಧ್ಯಕ್ಷ (Russia President) ವ್ಲಾಡಿಮಿರ್ ಪುಟಿನ್ (Vladimir Putin) ಅವರಿಗೆ ಸಲಹೆ ನೀಡಿದ್ದನ್ನೂ ಪರಿಗಣಿಸಿದೆ.

G-7 ರಾಷ್ಟ್ರಗಳು ನಿಗದಿಪಡಿಸಿರುವ ಬೆಲೆ ನ್ಯಾಯಯುತ ಅಥವಾ ಸ್ವೀಕಾರಾರ್ಹವಲ್ಲದೇ ಇದ್ದರೇ ಜಾಗತಿಕ ಮಾರುಕಟ್ಟೆಗೆ (Global Market) ಮತ್ತು ಯುಎಸ್ (US) ಉಪಕ್ರಮಕ್ಕೆ ಸೇರುವ ದೇಶಗಳಿಗೆ ತೈಲ ಪೂರೈಕೆ ನಿಲ್ಲಿಸುತ್ತೇವೆ ಎಂದು ಅಲಿಪೋವ್ ತಿಳಿಸಿದ್ದಾರೆ.
ರಷ್ಯಾ ತನ್ನ ವ್ಯಾಪಾರ ಹಿತಾಸಕ್ತಿಗಳಿಗೆ ಹಾನಿಕಾರಕವಾದ ಯಾವುದೇ ಕಾರ್ಯವಿಧಾನವನ್ನು ಅನುಸರಿಸುವುದಿಲ್ಲ. ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳು ವಿಧಿಸಿರುವ ನಿರ್ಬಂಧಗಳು ರಷ್ಯಾದ ಮೇಲೆ ಪ್ರಭಾವ ಬೀರಲಿವೆ. ಜಿ-7 ರಾಷ್ಟ್ರಗಳು ಮತ್ತು ಯುರೋಪಿಯನ್ ಒಕ್ಕೂಟವು ರಷ್ಯಾದ ಆದಾಯವನ್ನು ಮಿತಿಗೊಳಿಸುವ ಉದ್ದೇಶದಿಂದಲೇ ರಷ್ಯಾದ ಕಚ್ಚಾ ಹಾಗೂ ಸಂಸ್ಕರಿಸಿದ ಉತ್ಪನ್ನಗಳ ಮೇಲೆ ತೈಲ ಬೆಲೆ ಮಿತಿಯನ್ನು ವಿಧಿಸಿವೆ. ಇದು ನಿರ್ದಿಷ್ಟವಾಗಿ ರಷ್ಯಾದ ಆದಾಯ ಕಡಿಮೆ ಮಾಡಲು ಹಾಗೂ ಉಕ್ರೇನ್ (Ukraine war) ವಿರುದ್ಧ ನಡೆಸುತ್ತಿರುವ ಯುದ್ಧಕ್ಕೆ ನಿಧಿಯ ಸಾಮರ್ಥ್ಯವನ್ನು ತಗ್ಗಿಸುವ ಉದ್ದೇಶ ಹೊಂದಿದೆ ಎಂದು ಹೇಳಿದ್ದಾರೆ.
ಈ ಬೆಲೆಯ ಮಿತಿಯು ಜಾಗತಿಕ ಮಾರುಕಟ್ಟೆಗಳಲ್ಲಿ ತೈಲದ ತೀವ್ರ ಕೊರತೆಗೆ ಕಾರಣವಾಗುತ್ತದೆ. ಜೊತೆಗೆ ಮಾರುಕಟ್ಟೆಗಳಲ್ಲಿ ತೈಲ ಬೆಲೆ ಏರಿಕೆಗೂ ಕಾರಣವಾಗುತ್ತದೆ ಎಂದು ಅಲಿಪೋವ್ ಎಚ್ಚರಿಸಿದ್ದಾರೆ.