Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಪ್ಯಾಲೆಸ್ಟೈನ್ ಪ್ರತ್ಯೇಕ ದೇಶಕ್ಕಾಗಿ ಇಟಲಿಯಲ್ಲಿ ತೀವ್ರ ಪ್ರತಿಭಟನೆ – ಬಂದರಿಗೆ ಬೆಂಕಿ, 60 ಪೊಲೀಸರಿಗೆ ಗಾಯ

    ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು: ಮಂಗಳೂರಿನಿಂದ ಎಲ್ಲಿಗೆ ಗೊತ್ತಾ?

    ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು: ಮಂಗಳೂರಿನಿಂದ ಎಲ್ಲಿಗೆ ಗೊತ್ತಾ?

    I Love Muhammad: ಯಾಕೆ ಈ ಟ್ರೆಂಡ್ ವೈರಲ್ ಆಗ್ತಿದೆ? ಏನಿದರ ಸತ್ಯ?

    ಸ್ಮಗ್ಲಿಂಗ್ ಪ್ರಕರಣ: ಸ್ಟಾರ್ ನಟ ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಮನೆ ಮೇಲೆ ದಾಳಿ

    ಸ್ಮಗ್ಲಿಂಗ್ ಪ್ರಕರಣ: ಸ್ಟಾರ್ ನಟ ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಮನೆ ಮೇಲೆ ದಾಳಿ

    ಗೋಮಾಂಸ ಸಾಗಾಟ ಆರೋಪ.. ಬೆಳಗಾವಿಯಲ್ಲಿ ಲಾರಿಗೆ ಬೆಂಕಿ ಹಚ್ಚಿ ಆಕ್ರೋಶ

    ವಿಮಾನದ ಲ್ಯಾಂಡಿಂಗ್ ಗೇರ್ ಬಳಿ ಅಡಗಿ 2 ಗಂಟೆ ಪ್ರಯಾಣಿಸಿ ಭಾರತಕ್ಕೆ ಬಂದ ಅಫ್ಘಾನ್‌ ಬಾಲಕ!

    ಧರ್ಮಸ್ಥಳ ಪ್ರಕರಣ: ತಿಮರೋಡಿ-ಚಿನ್ನಯ್ಯ ಸಂಭಾಷಣೆಯ 8ನೇ ವಿಡಿಯೋ ಬಿಡುಗಡೆ

    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ರಾಜ್ಯ

ವಕ್ಫ್ ಆಸ್ತಿ ಕಬಳಿಕೆ: ಇದು ದೊಡ್ಡ ಕುಳಗಳು ಶಾಮೀಲಾಗಿರುವ 2.30 ಸಾವಿರ ಕೋಟಿ ಮೀರಿದ ಹಗರಣ

editor tv by editor tv
September 20, 2022
in ರಾಜ್ಯ, ಸುದ್ದಿ
0
ವಕ್ಫ್ ಆಸ್ತಿ ಕಬಳಿಕೆ: ಇದು ದೊಡ್ಡ ಕುಳಗಳು ಶಾಮೀಲಾಗಿರುವ 2.30 ಸಾವಿರ ಕೋಟಿ ಮೀರಿದ ಹಗರಣ
1.9k
VIEWS
Share on FacebookShare on TwitterShare on Whatsapp

ಮಂಗಳೂರು: ಕರ್ನಾಟಕ ವಿಧಾನಸಭೆ ಕಲಾಪದಲ್ಲಿ ಇಂದು ಅನ್ವರ್ ಮಣಪ್ಪಾಡಿ ಅವರು 2012ರಲ್ಲಿ ಸಲ್ಲಿಸಿರುವ ವಕ್ಫ್ ಆಸ್ತಿ ಅಕ್ರಮಕ್ಕೆ ಸಂಬಂಧಿಸಿದ ವರದಿ ಮಂಡನೆಯಾಗುವ ಸಾಧ್ಯತೆಯಿದೆ. ಈ ವರದಿಯ ಪ್ರಕಾರ ವಕ್ಫ್​ ಮಂಡಳಿಗೆ ಸಂಬಂಧಿಸಿದ ₹ 2.30 ಸಾವಿರ ಕೋಟಿ ಮೊತ್ತದ ಅವ್ಯವಹಾರ ನಡೆದಿದೆ. ವರದಿಯ ಕುರಿತು ಮಂಗಳೂರಿನಲ್ಲಿ ಬಿಜೆಪಿ ನಾಯಕ ಅನ್ವರ್ ಮಣಪ್ಪಾಡಿ ಮಾಹಿತಿ ನೀಡಿದರು. ಈ ವರದಿಗೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ನ್ಯಾಯ ಸಿಗಲಿಲ್ಲ. ಯಡಿಯೂರಪ್ಪ ಮತ್ತು ಅವರ ಮಗ ವರದಿಯನ್ನು ಮಾರಿಕೊಂಡಿದ್ದರು. ಸತ್ಯ ಹೊರಗೆಳೆಯಲು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಈಗ ಸದವಕಾಶವಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಇಂದು ಸುಳ್ಳು ಕತೆ ಇರಿಸಿಕೊಂಡು ಸದನಕ್ಕೆ ಬಂದಿದ್ದಾರೆ. ಆ ಸುಳ್ಳು ಕಂತೆಯ ಬಲೆಗೆ ನೀವು ಬೀಳಬೇಡಿ. ವಕ್ಫ್​ ಆಸ್ತಿಯ ಮೇಲೆ ಹಲವು ಸಂಕೀರ್ಣಗಳು, ಪಂಚತಾರ ಹೊಟೆಲ್​ಗಳು, ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳು ನಿರ್ಮಾಣವಾಗಿವೆ.

ಈ ಹಗರಣದಲ್ಲಿ ಸಿ.ಎಂ.ಇಬ್ರಾಹಿಮ್, ಹ್ಯಾರಿಸ್, ಕಮರುಲ್ಲಾ ಇಸ್ಲಾಂ, ಮಲ್ಲಿಕಾರ್ಜುನ ಖರ್ಗೆ, ಇಕ್ಬಾಲ್ ಅನ್ಸಾರಿ, ಜಾಫರ್ ಷರೀಫ್, ರೆಹಮಾನ್ ಖಾನ್, ಧರಂಸಿಂಗ್, ಸೂರ್ಯವಂಶಿ, ರೋಷನ್ ಬೇಗ್ ಸೇರಿದಂತೆ ಅಂದಿನ ಎಲ್ಲಾ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ‌. ವರದಿಯ ಪರವಾಗಿ ಹೈಕೋರ್ಟ್, ಸುಪ್ರಿಂಕೋರ್ಟ್​ವರೆಗೂ ಹೋಗಿ ಗೆದ್ದಿದ್ದೇನೆ. ಇನ್ನು ದೇವರ ಹತ್ತಿರ ಹೋದ ಮೇಲೆ ಕ್ರಮ ಕೈಗೊಳ್ತೀರಾ ಎಂದು ಪ್ರಶ್ನಿಸಿದರು.

ಈ ವರದಿಯು ಸುಳ್ಳು ಎಂದಾದರೆ ತಲೆ ಕಡಿದು ಇಡುತ್ತೇನೆ‌. ಬೊಮ್ಮಾಯಿಯವರೇ ದೈರ್ಯವಾಗಿ ಮುಂದೆ ಹೋಗಿ. ಬೆಂಗಳೂರಿನ ಬೆಲ್ಲಳ್ಳಿ ಸರ್ವೇ ನಂಬರ್ 55ರ 602 ಎಕರೆ, ಜಾಫರ್ ಷರೀಫ್ ಎಂಜಿನಿಯರಿಂಗ್ ಕಾಲೇಜು, ಪಂಚತಾರ ಹೋಟೇಲ್, ವಿಂಡ್ಸರ್ ಮ್ಯಾನರ್ ಕೂಡ ವಕ್ಫ್ ಆಸ್ತಿ ಎಂದು ವಿವರಿಸಿದರು.

ಅಕ್ರಮ ತಡೆಯಲು ಬಹಿರಂಗ ಪತ್ರ ಬರೆದಿದ್ದ ಅನ್ವರ್ ಮಾಣಿಪ್ಪಾಡಿ

ವಕ್ಫ್​ ಮಂಡಳಿಯಲ್ಲಿ ನಡೆಯುತ್ತಿರುವ ಅಕ್ರಮ ತಡೆಗಟ್ಟುವಲ್ಲಿ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹೆಚ್ಚುವರಿ ಮಹಾ ನಿರ್ದೇಶಕ, ಐಎಎಸ್ ಅಧಿಕಾರಿ ಮಹೇಂದ್ರ ಜೈನ್​ ಅವರಿಗೆ ಅನ್ವರ್ ಮಾಣಿಪ್ಪಾಡಿ ಡಿಸೆಂಬರ್ 4, 2020ರಂದು ಬಹಿರಂಗ ಪತ್ರ ಬರೆದಿದ್ದರು. ತಮ್ಮ ಪತ್ರದಲ್ಲಿ ಅವರು ಅಕ್ರಮದ ಹಲವು ವಿವರಗಳನ್ನು ನೀಡಿದ್ದರು. ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಕಂಬಲ್ ಪೋಶ್ ದರ್ಗಾಕ್ಕೆ ನಿವೃತ್ತ ಕೆಎಎಸ್​ ಅಧಿಕಾರಿ ಆತೀಕ್ ಅಹ್ಮದ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿತ್ತು. ಆದರೆ, ಅವರಿಗೆ ಅಧಿಕಾರ ಹಸ್ತಾಂತರಿಸಲು 8 ವರ್ಷಗಳಿಂದ ಅಧಿಕಾರದಲ್ಲಿದ್ದ ಅಧಿಕಾರಿ ಸತಾಯಿಸಿದ್ದರು ಎಂದು ಅನ್ವರ್ ತಮ್ಮ ಪತ್ರದಲ್ಲಿ ದೂರಿದ್ದರು.

ಅಧಿಕಾರಕ್ಕೆ ಬಂದ ಐದೇ ತಿಂಗಳಲ್ಲಿ ಆತೀಕ್ ಅಹ್ಮದ್ ತಮ್ಮ ಸಾಮರ್ಥ್ಯವನ್ನು ತೋರಿದ್ದಾರೆ. ಮೊದಲಿದ್ದ ಸಮಿತಿ 12 ವರ್ಷದಲ್ಲಿ ₹ 26 ಲಕ್ಷ ಮೊತ್ತವನ್ನು ಮಾತ್ರ ಸಂಗ್ರಹಿಸಿತ್ತು. ಆದರೆ ಆತೀಕ್ ಅಹ್ಮದ್ ಕೇವಲ ₹ 5 ತಿಂಗಳಲ್ಲಿ 35 ಲಕ್ಷ ಸಂಗ್ರಹಿಸಿದ್ದಾರೆ. ಹಾಗಾದರೆ ಮೊದಲು ಎಷ್ಟು ಅವ್ಯವಹಾರ ನಡೆದಿತ್ತು ಎಂದು ಅನ್ವರ್ ಪ್ರಶ್ನಿಸಿದ್ದರು. ಅಹ್ಮದ್ ಬಂದ ನಂತರ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಇದು ಮೊದಲಿದ್ದವರಿಗೆ ಏಕೆ ಸಾಧ್ಯವಾಗಲಿಲ್ಲ? ಇದು ವಕ್ಫ್ ಇಲಾಖೆಯ ಅವ್ಯವಹಾರಕ್ಕೆ ಒಂದು ಉದಾಹರಣೆಯಷ್ಟೇ. ಇದೇ ರೀತಿ ಕೋಲಾರದ ಚಿಂತಾಮಣಿಯ ಮುರುಗಮಲ್ಲಾ ದರ್ಗಾದಲ್ಲೂ ಅವ್ಯವಹಾರ ನಡೆಯುತ್ತಿದೆ. ಇವೆಲ್ಲವನ್ನೂ ಮಟ್ಟ ಹಾಕಬೇಕು. ದರ್ಗಾಗಳಲ್ಲಿ 8-10 ವರ್ಷಗಳಿಂದ ದುಡಿಯುತ್ತಿರುವವರಿಗೆ ಮೂರು ಕಾಸಿನ ಸಂಬಳ ನೀಡಲಾಗುತ್ತಿದೆ. ಬಂದ ಆದಾಯವೆಲ್ಲವೂ ಯಾರದ್ದೋ ಪಾಲಾಗುತ್ತಿದೆ ಎಂದು ಆರೋಪಿಸಿದ್ದರು.

ಇನ್ನಾದರೂ ಸರ್ಕಾರ ವಕ್ಫ್ ಇಲಾಖೆಯ ಭ್ರಷ್ಟ ಚಟುವಟಿಕೆಗಳಿಗೆ ಇತಿಶ್ರೀ ಹಾಡಬೇಕು. ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸುವ ಮೂಲಕ ಪಾರದರ್ಶಕ ಆಡಳಿತ ಆಗುವಂತೆ ಗಮನ ಹರಿಸಬೇಕು ಎಂದು ಅನ್ವರ್ ಮಾಣಿಪ್ಪಾಡಿ ಮನವಿ ಮಾಡಿದ್ದರು.

Previous Post

ಅಲ್ಪ ಸಂಖ್ಯಾತ ಮುಸ್ಲಿಮರ ಧರ್ಮಾಚರಣೆಗೆ ಬೆಲೆ ಕೊಟ್ಟರೇನು ತಪ್ಪು?: ದವೆ ವಾದ

Next Post

ದಲಿತ ಬಾಲಕನಿಗೆ ದಂಡ :ಗ್ರಾಮಸ್ಥರು ದೇವರೆಂದು ಆರಾಧಿಸುವ ಮೂರ್ತಿ ಮುಟ್ಟಿದಕ್ಕೆ ಬೆದರಿಕೆ ಹಾಕಿ, 60 ಸಾವಿರ ದಂಡ‌ ವಿಧಿಸಿದ ಗ್ರಾಮಸ್ಥರು

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.