
ಮಂಗಳೂರು :ಫಾಝಿಲ್, ಮಸೂದ್ ಕುಟುಂಬಕ್ಕೆ ನ್ಯಾಯಕ್ಕೆ ಹಾಗೂ ಸರಕಾರದ ತಾರತಮ್ಯ ನೀತಿಯ ವಿರುದ್ಧ ಜಿಲ್ಲೆಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಪುರಭವನದ ಮುಂಬಾಗ ಮೌನ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವರಾದ ರಮಾನಾಥ ರೈ ಯವರು, ಜಿಲ್ಲೆಯಲ್ಲಿ ನಡೆದ ಮೂರು ಕೋಮು ಹತ್ಯೆಗಳ ಬಗ್ಗೆ ತೀವ್ರ ರೀತಿಯಲ್ಲಿ ಖಂಡಿಸಿದರು. ಉದ್ರೇಕಕಾರಿ ಭಾಷಣ ಗಳಿಂದಾಗಿ ಇಂತಹ ಘಟನೆಗಳು ನಡೆಯುತ್ತವೆ, ಫಾಝಿಲ್ ಮಸೂದ್ ಕುಟುಂಬಕ್ಕೆ ತಾರತಮ್ಯ ವಿಲ್ಲದೆ ಸಮಾನ ನ್ಯಾಯ ದೊರಕಬೇಕೆಂದರು. ಮುಖ್ಯಮಂತ್ರಿ ಮಂತ್ರಿಯಯವರ ತಾರತಮ್ಯ ನೀತಿಯನ್ನು ಕಟುವಾಗಿ ಖಂಡಿಸಿದರು.
ಪ್ರತಿಭಟನೆಯಲ್ಲಿ ಫಾಝಿಲ್ರವರ ತಂದೆ ಹಾಗೂ ಮಸೂದ್ ತಾಯಿ ಭಾಗವಹಿಸಿದ್ದರು. ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ, ಮಾಜಿ ಶಾಸಕರಾದ ಮೊಯಿದಿನ್ ಬಾವ, ಅಭಯಚಂದ್ರ ಜೈನ್, ಹಾಗೂ ಜಿಲ್ಲೆಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು.
