

ವಾಷಿಂಗ್ಟನ್: ತೈವಾನ್(Taiwan) ಮೇಲೆ ಚೀನಾ(China) ಯದ್ಧ ಸಾರಿದರೆ ಅಮೆರಿಕ ಪಡೆಗಳು ತೈವಾನ್ ಅನ್ನು ರಕ್ಷಿಸುತ್ತವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್(Joe Biden) ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಅಮೆರಿಕ(America) ಪಡೆಗಳು ತೈವಾನ್ ಮೇಲೆ ಚೀನಾ ಹಕ್ಕು ಪಡೆಯಲು ಸಾಧಿಸುತ್ತಿದೆ. ಇದನ್ನು ತಡೆಯುತ್ತೀರಾ ಎಂಬ ಪ್ರಶ್ನೆಗೆ ಹೌದು. ತೈವಾನ್ ಬಗೆಗಿನ ಯುಎಸ್(US) ನೀತಿ ಬದಲಾಗಿಲ್ಲ ಎಂದು ತಿಳಿಸಿದ್ದಾರೆ.
ಉಕ್ರೇನ್ ಯದ್ಧದಲ್ಲಿ ಅಮೆರಿಕವು ನೇರವಾಗಿ ಪಾಲ್ಗೊಂಡಿಲ್ಲ. ಬದಲಿಗೆ ಶಸ್ತ್ರಾಸ್ತ್ರ, ಸೇರಿ ಹಣಗಳನ್ನು ಪೂರೈಕೆ ಮಾಡಿದೆ. ಆದರೆ ಅದೇ ಪರಿಸ್ಥಿತಿ ತೈವಾನ್‍ಗೆ ಬಂದರೆ ಅಮೆರಿಕವು ಚೀನಾದ ಮೇಲೆ ನೇರವಾಗಿ ಯುದ್ಧ ಮಾಡುತ್ತಿದೆ. ಈ ಮೂಲಕ ತೈವಾನ್ ಅನ್ನು ಚೀನಾದ ಆಕ್ರಮಣದಿಂದ ರಕ್ಷಿಸುತ್ತದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅಮೆರಿಕವು ತೈವಾನ್ ಮೇಲಿನ ದಾಳಿಗೆ ಮಿಲಿಟರಿಯಾಗಿ ಪ್ರತಿನಿಧಿಸುತ್ತದೆಯೇ ಎನ್ನುವುದನ್ನು ಅವರು ಸ್ಪಷ್ಟಪಡಿಸಲಿಲ್ಲ.
ಚೀನಾ ತೈವಾನನ್ನು ದೇಶವೆಂದು ಪರಿಗಣಿಸುತ್ತಿಲ್ಲ. ಬದಲಿಗೆ ತನ್ನ ರಾಜ್ಯವೆಂದೇ ತಿಳಿದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದಿನ ತಿಂಗಳು ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಗೆ ವಿರೋಧ ವ್ಯಕ್ತಪಡಿಸಿತ್ತು. ಭಾರೀ ವಿರೋಧದ ನಡುವೆಯೂ ನ್ಯಾನ್ಸಿ ತೈವಾನ್‍ಗೆ ಭೇಟಿ ನೀಡಿದ್ದು, ಚೀನಾವನ್ನು ಕೆರಳಿಸಿತ್ತು. ಈ ಹಿನ್ನೆಲೆಯಲ್ಲಿ ತೈವಾನ್‍ಗೆ ಚೀನಾ ಅನೇಕ ನಿರ್ಬಂಧಗಳನ್ನು ಹೇರಿತ್ತು. ಜೊತೆಗೆ ಆಕ್ರಮಣವನ್ನು ಮಾಡಲು ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿತ್ತು. 21 ಯುದ್ಧವಿಮಾನಗಳು ಹಾಗೂ 5 ರಕ್ಷಣಾ ಹಡಗುಗಳನ್ನು ಕಳುಹಿಸಿ ತೈವಾನ್‍ನನ್ನು ಚೀನಾ ಸುತ್ತುವರಿದಿತ್ತು.
