

ಬಳ್ಳಾರಿ: ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆಯಿಂದ (electricity failure) ವೆಂಟಿಲೇಟರ್ (Ventilator) ಸ್ಥಗಿತಗೊಂಡು, ಮೂವರು ರೋಗಿಗಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ವೆಂಟಿಲೇಟರ್ ಮೇಲ್ಲಿದ್ದ ರೋಗಿಗಳಾದ ಮೌಲಾ ಹುಸೇನ್ ಹಾಗೂ ಚೆಟ್ಟೆಮ್ಮ ಕೊನೆಯುಸಿರೆಳೆದ ದುರ್ದೈವಿಗಳು. ಐಸಿಯುನಲ್ಲಿದ್ದ 10 ರೋಗಿಗಳ ಪೈಕಿ, ಈ ಮೂವರು ರೋಗಿಗಳು ಅಸುನೀಗಿದ್ದಾರೆ.
ವಿಮ್ಸ್ ಆಸ್ಪತ್ರೆಯ (VIMS Hospital in Bellary) ವಿರುದ್ಧ ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಹಿನ್ನೆಲೆಯಲ್ಲಿ ಸಂಭವಿಸಿರುವ ದುರ್ಘಟನೆ ಬಗ್ಗೆ ಸ್ಪಷ್ಟನೆ ನೀಡಲು ವಿಮ್ಸ್ ಆಡಳಿತ ಮಂಡಳಿ ನಿರಾಕರಿಸಿದೆ.