

ಬೆಂಗಳೂರು: ರಾಜಕಾಲುವೆ ಒತ್ತುವರಿದಾರರ ಹಿಟ್ ಲಿಸ್ಟ್ ನಲ್ಲಿ ಕಾಂಗ್ರೆಸ್ ಯುವನಾಯಕ ಮಾಲೀಕತ್ವದ ನಲಪಾಡ್ ಅಕಾಡೆಮಿ (Nalapad Academy) ಯಲ್ಲಿ ನಿನ್ನೆ (ಮಂಗಳವಾರ) ರಾಜಕಾಲುವೆ ತೆರವು ಕಾರ್ಯಾಚರಣೆ ವೇಳೆ ಹೈಡ್ರಾಮವೇ ನಡೆಯಿತು. ದೊಡ್ಡವರ ಮುಂದೆ ಜೆಸಿಬಿ (JCB) ಘರ್ಜನೆ ಸೈಲೆಂಟ್ ಆಗಿತ್ತು. ಇಂದೂ ಕೂಡ ನಲಪಾಡ್ ಅಕಾಡೆಮಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಪ್ರಹಸನ ಮುಂದುವರಿಯಲಿದೆ.

ಜಸ್ಟ್ ಕಾಪೌಂಡ್ ಗೋಡೆ ಜೆಸಿಬಿಯಿಂದ ಟಚ್ ಮಾಡ್ತಿದ್ದಂತೆ ನಲಪಾಡ್ ಅಕಾಡೆಮಿಯ ಮ್ಯಾನೇಜರ್ ಕಿರುಚಾಟ, ಕಾರ್ಯಾಚರಣೆ ಸ್ಥಗಿತ. ಮತ್ತೆ ಮಾಧ್ಯಮ ಪ್ರಶ್ನೆ ಮಾಡ್ತಿದ್ದಂತೆ ಕಾರ್ಯಾಚರಣೆ ಆರಂಭ. ಹೀಗೆ ನಿನ್ನೆ ಚಲ್ಲಘಟ್ಟದ. ಶಾಸಕ ಹ್ಯಾರಿಸ್ (Harris) ಹಾಗೂ ನಲಪಾಡ್ ಮಾಲೀಕತ್ವದ ನಲಪಾಡ್ ಅಕಾಡೆಮಿಯ ತೆರವು ಕಾರ್ಯಾಚರಣೆ ವೇಳೆ ದೊಡ್ಡ ಹೈಡ್ರಾಮವೇ ನಡೆದುಹೋಯ್ತು. ಕೊನೆಗೂ ಜೆಸಿಬಿಯಿಂದ ರಾಜಕಾಲುವೆ ತೆರವು ಕಾರ್ಯಾಚರಣೆ ಮುಂದುವರಿದಿದ್ದು ಇಂದೂ ಕೂಡ ನಡೆಯಲಿದೆ. 150 ಮೀಟರ್ ಉದ್ದ 2.5 ಮೀಟರ್ ಅಗಲ ವಿರುವ ರಾಜಕಾಲುವೆ ಒತ್ತುವರಿ ಸಧ್ಯ 50 ಮೀಟರ್ ತೆರವು ಆಗಿದೆ. ಇಂದು ಉಳಿದ ಭಾಗದಲ್ಲಿಒತ್ತುವರಿ ತೆರವು ನಡೆಯಲಿದೆ.

ನಿನ್ನೆ ಕ್ಷಣಕ್ಕೊಂದು ನಾಟಕವಾಡಿ ರಾಜಕಾಲುವೆ (Rajakaluve) ಒತ್ತುವರಿ ಮಾಡೇ ಇಲ್ಲ ಅಂತಾ ಶಾಸಕ ಹ್ಯಾರಿಸ್ ಸೇರಿದಂತೆ ಅಕಾಡೆಮಿಯ ಸಿಬ್ಬಂದಿಯೂ ವಾದ ಮಾಡ್ತಿದ್ರು. ಹೀಗಾಗಿ ಇಂದಿನ ಕಾರ್ಯಾಚರಣೆ ವೇಳೆಯೂ ಹೈಡ್ರಾಮ ನಡೆಯೋದು ಖಚಿತವಾಗಿದೆ. ಇನ್ನು ಒತ್ತುವರಿ ಭಾಗದಲ್ಲಿ ಕಾಪೌಂಡ್ ಕಟ್ಟಿ ಫೆನ್ಸಿಂಗ್ ಕೂಡ ಮಾಡಲಾಗಿದೆ.
ಬಡವರ ಮನೆ ಮುಂದೆ ಬಾಹುಬಲಿ, ಶ್ರೀಮಂತರ ಮನೆ ಮುಂದೆ ಇಲಿಯಂತೆ ಬಿಬಿಎಂಪಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಪ್ರಭಾವಿಗಳನ್ನು ಕಂಡ್ರೆ ಒತ್ತುವರಿಯೇ ಕೈಬಿಟ್ಟು ಕೈಕಟ್ಟಿ ನಿಂತುಬಿಡ್ತಾರೆ. ಹೀಗಾಗಿಯೇ ಜನರಿಗೆ ಅಪರೇಷನ್ ಬುಲ್ಡೋಜರ್ (Operation Buldozer) ಬಗ್ಗೆ ಅಪನಂಬಿಕೆ ಇರೋದು. ಇನ್ನೊಂದು ಕಡೆ ಜನ್ರಿಗೆ ಮಾದರಿಯಾಗಬೇಕಾಗಿದ್ದ ಜನಪ್ರತಿನಿಧಿಗಳೇ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವು ವಿಷಾದನೀಯ.