

ಬದುಕಿನ ಜಂಜಾಟದಲ್ಲಿ ಸಿಗುವ ಸಮಯ ವ್ಯರ್ಥ ಮಾಡದೇ ಸಮಾಜ ಸೇವೆಗೆ ವಿನಿಯೋಗಿಸಿರಿ ಯಾವ ಕಾರಣಕ್ಕೂ ಸಮಯವನ್ನು ವ್ಯರ್ಥ ಮಾಡದಿರಿ ಎಂದು ಕರ್ನಾಟಕ ರಾಜ್ಯ ಮಾಜಿ ಸಚಿವರಾದ ಯು.ಟಿ.ಖಾದರ್ ಅಭಿಪ್ರಾಯ ಪಟ್ಟರು. ಅವರು ಇಂದು ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ)ಸಂಸ್ಥೆಯ ಸಹಕಾರದಲ್ಲಿ ಕೆ ಎಂ ಸಿ ಆಸ್ಪತ್ರೆ ರಕ್ತನಿಧಿ ಮಂಗಳೂರು ಇವರ ಸಹಭಾಗಿತ್ವದಲ್ಲಿ ತೊಕ್ಕೊಟು ಕಲ್ಲಾಪುವಿನಲ್ಲಿ ನೂತನವಾಗಿ ಆರಂಭಗೊಂಡ ಲೈಟ್ ಗ್ಯಾಲರಿ ಶೋ ರೂಮ್ ಲೋಕಾರ್ಪಣೆ ಗೈದು ಮಾತಾಡುತ್ತಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಸಲಹೆಗಾರರಾದ ಸುಲೈಮಾನ್ ಶೇಖ್ ಬೆಳುವಾಯಿ ಮಾತಾಡಿ ವ್ರತ್ತಿ ಬದುಕನ್ನು ಸುಂದರವಾಗಿ ಮುನ್ನಡೆಸಲು ಪ್ರವೃತ್ತಿ ಸಮಾಜ ಮುಖಿಯಾಗಿರಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಇದರ ಅದ್ಯಕ್ಷರಾದ ಡಾ. ಎ.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ಉಳ್ಳಾಲ ನಗರಸಭೆ ನೋಮಿನೇಟ್ ಸದಸ್ಯರಾದ ಭಗವಾನ್ ದಾಸ್,ಗ್ಲೋಬಲ್ ಮಾರ್ಕೆಟ್ ಇದರ ಅದ್ಯಕ್ಷರಾದ ಫೈರೋಝ್,ಲೈಟ್ ಗ್ಯಾಲರಿ ಮುಖ್ಯ ಸಲಹೆಗಾರರಾದ ಉಸ್ಮಾನ್ ಟಿ.ಎಚ್,ದಾರ್ಮಿಕ ಗುರು ಇರ್ಷಾದ್ ದಾರಿಮಿ ಅಲ್ ಝ಼ಹರಿ, ಹಂಝಾ ಎಂ.ಕೆ, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಅದ್ಯಕ್ಷರಾದ ನಝೀರ್ ಹುಸೇನ್, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಸಲಹೆಗಾರರಾದ ಫಯಾಝ್ ಅಲಿ ಬೈಂದೂರು, ಗ್ಲೋಬಲ್ ಮಾರ್ಕೆಟ್ ಇದರ ಪ್ರದಾನ ಕಾರ್ಯದರ್ಶಿ ಮಹಮ್ಮದ್ ರಫೀಕ್, ಕೆ ಎಂ ಸಿ ಆಸ್ಪತ್ರೆಯ ಮುಖ್ಯಸ್ಥ ರಾದ ಪ್ರಜ್ವಲ್, ರಕ್ತ ಪೂರೈಕೆ ವಿಭಾಗದ ಮುಖ್ಯಸ್ಥ ಮುಸ್ತಫಾ ಕೆ.ಸಿ.ರೋಡ್, ಶಿಬಿರದ ಉಸ್ತುವಾರಿ ಖಾದರ್ ಮುಂಚೂರು,ಜತೆ ಕಾರ್ಯದರ್ಶಿ ಬಶೀರ್ ಕಾರ್ಯ ನಿರ್ವಾಹಕರಾದ ಅಶ್ರಪ್ ಮಂಚಿಲ,ರಾಫಿಝ್ ಕ್ರಷ್ಣಾಪುರ ಉಪಸ್ಥಿತರಿದ್ದರು. ಸಮಸ್ತ ಕರ್ನಾಟಕ ಮುಷಾವರ ಕೋಶಾಧಿಕಾರಿ ಸಯ್ಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಲ್ ದುವಾ ಗೈದರು. ನಿಬಾಲ್ ಬಿನ್ ನಝೀರ್ ಹುಸೇನ್ ಕಿರಾಅತ್ ಪಠಿಸಿದರು. ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಲೈಟ್ ಗ್ಯಾಲರಿ ಮಾಲಕರಾದ ಸಪ್ವಾನ್ ಕಲಾಯಿ ಸ್ವಾಗತಿಸಿದರು.ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಸಂಚಾಲಕ ರಾದ ಶಂಸುದ್ದೀನ್ ಬಲ್ಕುಂಜೆ ಪ್ರಸ್ತಾಪಿಸಿದರು.ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಮಾದ್ಯಮ ಕಾರ್ಯದರ್ಶಿ ಅಬ್ದುಲ್ ಹಮೀದ್ ಗೋಳ್ತಮಜಲ್ ಕಾರ್ಯಕ್ರಮ ನಿರೂಪಿಸಿದರು. ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರ) ಸಂಸ್ಥೆಯ ಕೋಶಾಧಿಕಾರಿ ಸತ್ತಾರ್ ಪುತ್ತೂರು ವಂದಿಸಿದರು.