

ಮೊಹಾಲಿ: ಪಂಜಾಬ್‌ನ ಮೊಹಾಲಿಯಲ್ಲಿರುವ (Mohali) ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಮಜಾ ಮಾಡಲು ಹೋದಾಗ ದುರಂತ ಸಂಭವಿಸಿದೆ. ಜಾಯಿಂಟ್ ವೀಲ್ನಲ್ಲಿ ಮೋಜಿನ ಸವಾರಿ ಮಾಡುತ್ತಿದ್ದಾಗ ಆ ಜಾಯಿಂಟ್ವೀಲ್ ಕಟ್ ಆಗಿ ನೆಲಕ್ಕೆ ಅಪ್ಪಳಿಸಿದೆ. ದುಶೇರಾ ಮೈದಾನದಲ್ಲಿ ಈ ಘಟನೆ ನಡೆದಿದ್ದು, 16ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಡ್ರಾಪ್ ಟವರ್ ಹೆಸರಿನ ಸ್ವಿಂಗ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ಇದರಿಂದ ಸುಮಾರು 50 ಅಡಿ ಎತ್ತರದಿಂದ ಸ್ವಿಂಗ್ ಕೆಳಗೆ ಬಿದ್ದು 16 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಲ್ಲಿ ಮಕ್ಕಳು, ಮಹಿಳೆಯರು ಮತ್ತು ಪುರುಷರು ಸೇರಿದ್ದಾರೆ. ಗಾಯಗೊಂಡ ಐವರನ್ನು ಸಿವಿಲ್ ಮತ್ತು ಇತರರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೊಹಾಲಿಯ 8ನೇ ಹಂತದ ದುಶೇರಾ ಮೈದಾನದಲ್ಲಿ ಲಂಡನ್ ಬ್ರಿಡ್ಜ್ ಎಂಬ ಹೆಸರಿನಲ್ಲಿ ಜಾತ್ರೆ ನಡೆಯುತ್ತಿತ್ತು. ಭಾನುವಾರವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕುಟುಂಬ ಸಮೇತ ಜಾತ್ರೆಗೆ ಆಗಮಿಸಿದ್ದರು. ಡ್ರಾಪ್ ಟವರ್ ಸ್ವಿಂಗ್‌ನಲ್ಲಿ ಸುಮಾರು 30 ಜನರಿದ್ದರು. ಸುಮಾರು 50 ಅಡಿ ಎತ್ತರದಲ್ಲಿ ಸ್ವಿಂಗ್ ತಿರುಗುತ್ತಿದ್ದಾಗ ತಾಂತ್ರಿಕ ದೋಷ ಉಂಟಾಗಿ ನೆಲಕ್ಕೆ ಅಪ್ಪಳಿಸಿದೆ.

ಈ ಘಟನೆ ನಡೆದ ಕೂಡಲೆ ಜಾಯಿಂಟ್ ವೀಲ್ ನಿರ್ವಾಹಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಮಾಹಿತಿ ತಿಳಿದ ತಕ್ಷಣ ಎಸ್‌ಡಿಎಂ ಸರಬ್ಜಿತ್ ಕೌರ್ ಮತ್ತು ನಾಯಬ್ ತಹಸೀಲ್ದಾರ್ ಅರ್ಜುನ್ ಗ್ರೆವಾಲ್ ಸ್ಥಳಕ್ಕೆ ಆಗಮಿಸಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ. ಈ ಬಗ್ಗೆ ತನಿಖೆ ನಡೆಸಿ ಯಾರೇ ತಪ್ಪಿತಸ್ಥರಾದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಅಮಿತ್ ತಲ್ವಾರ್ ತಿಳಿಸಿದ್ದಾರೆ.