

ಲಕ್ನೋ: ಮನೆಯೊಂದರಲ್ಲಿ ಸಾಮೂಹಿಕವಾಗಿ ನಮಾಜ್ ಮಾಡಿದ್ದನ್ನು ವಿರೋಧಿಸಿ ದಾಖಲಿಸಲಾಗಿದ್ದ ಪ್ರಕರಣವನ್ನು ಉತ್ತರ ಪ್ರದೇಶ ಪೊಲೀಸರು ರದ್ದುಗೊಳಿಸಿದ್ದಾರೆ. ತನಿಖೆ ನಡೆಸುವಂತಹ ಯಾವುದೇ ಘಟನೆ ಅಲ್ಲಿ ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆಗಸ್ಟ್ 24 ರಂದು ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ದುಲ್ಹೇಪುರ್ ಗ್ರಾಮದಲ್ಲಿ 26 ಮುಸ್ಲಿಮರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಮನೆಯೊಂದರಲ್ಲಿ ಮುಸ್ಲಿಮರ ಸಾಮೂಹಿಕ ನಮಾಜ್‌ಗೆ ನೆರೆಹೊರೆಯವರು ವಿರೋಧ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು
ಮೊರಾದಾಬಾದ್ ಜಿಲ್ಲೆಯ ಗ್ರಾಮವೊಂದರಲ್ಲಿ ಮಸೀದಿ ಇರಲಿಲ್ಲ. ಹೀಗಾಗಿ ಕೆಲವು ನಿವಾಸಿಗಳು ಸಭೆ ಹಿನ್ನೆಲೆಯಲ್ಲಿ ಒಂದೇ ಮನೆಯೊಳಗೆ ಸೇರಿದ್ದಾರೆ. ಈ ಸಂದರ್ಭದಲ್ಲಿ ನಮಾಜ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಇಂದು ಮೊರಾದಾಬಾದ್ ಪೊಲೀಸರು ಹಿಂದಿಯಲ್ಲಿ ವೀಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಗ್ರಾಮದಲ್ಲಿ ತನಿಖೆ ನಡೆಸಿದ ನಮ್ಮ ಪೊಲೀಸ್ ತಂಡವು ದೂರು ಆಧಾರರಹಿತ ಎಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ