

ಲಖನೌ: ಪೂರ್ವಾನುಮತಿ ಇಲ್ಲದೆ ಮನೆಯೊಂದರಲ್ಲಿ ನಮಾಜ್ (Namaz) ಮಾಡಿದ ಉತ್ತರ ಪ್ರದೇಶದ (Uttar Pradesh) ಮೊರಾದಾಬಾದ್ ಜಿಲ್ಲೆಯ ದುಲ್ಹೇಪುರ್ ಗ್ರಾಮದಲ್ಲಿ 26 ಮುಸ್ಲಿಮರ ವಿರುದ್ಧ ಪೊಲೀಸ್ ಕೇಸ್ ದಾಖಲಾಗಿದೆ. ಗ್ರಾಮದಲ್ಲಿ ಮಸೀದಿ ಇಲ್ಲ, ನಮಾಜ್‌ಗಾಗಿ ಮನೆಗಳ ಒಳಗೆ ಸೇರುವುದನ್ನು ಕೆಲವು ನಿವಾಸಿಗಳು ವಿರೋಧಿಸಿದ್ದಾರೆ. ಪೋಲೀಸರು “ನೆರೆಹೊರೆಯವರಿಂದ ಆಕ್ಷೇಪಣೆಗಳನ್ನು” ಉಲ್ಲೇಖಿಸಿದ್ದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505-2 ರ ಅಡಿಯಲ್ಲಿ ನಮಾಜ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಒಟ್ಟು ಸೇರಿಕೊಂಡು ನಮಾಜ್ ಮಾಡುವ ಮೂಲಕ ಈ ಜನರು ಜನರವಿರುದ್ದ ಸ್ಥಳೀಯ ನಿವಾಸಿ ಚಂದ್ರ ಪಾಲ್ ಸಿಂಗ್ ಅವರು ಆಗಸ್ಟ್ 24 ರಂದು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿದ್ದಾರೆ. ಹದಿನಾರು ಜನರನ್ನು ಹೆಸರಿಸಲಾಗಿದೆ ಎಲ್ಲರೂ ಸ್ಥಳೀಯರು ಎಂದು ವರದಿಯಾಗಿದೆ.
ಮನೆಯ ಕಾಂಪೌಂಡ್‌ನಲ್ಲಿ ಜನರು ಒಟ್ಟಾಗಿ ಸೇರಿ ಪ್ರಾರ್ಥಿಸುತ್ತಿರುವ ದೃಶ್ಯಗಳು ವೈರಲ್ ಆಗಿವೆ“ನೆರೆಹೊರೆಯವರಲ್ಲಿ ಒಬ್ಬರು 26 ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಹವನ ಮಾಡಿದರೆ ಅದು ಸಂಪೂರ್ಣವಾಗಿ ಸ್ವೀಕಾರಾರ್ಹವಾಗಿರುತ್ತದೆ ಎಂದು ನನಗೆ ಖಾತ್ರಿಯಿದೆ. ಇದು ‘ಸಾಮೂಹಿಕ ಸಭೆ’ ಅಲ್ಲ ಇದು ನಮಾಜ್ ಎಂಬುದೇ ಸಮಸ್ಯೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.
