

ಬಿಲ್ಕಿಸ್ ಬಾನು (Bilkis Bano case )ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಗುಜರಾತ್ (Gujarat) ಸರ್ಕಾರ 11 ಜೀವಾವಧಿ ಅಪರಾಧಿಗಳಿಗೆ ನೀಡಿರುವ ಬಿಡುಗಡೆ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ನೇತೃತ್ವದ ಸುಪ್ರೀಂಕೋರ್ಟ್ನ (Supreme Court)ವಿಶೇಷ ತ್ರಿಸದಸ್ಯ ಪೀಠ ಇಂದು (ಗುರುವಾರ) ವಿಚಾರಣೆ ನಡೆಸಲಿದೆ. ನ್ಯಾಯವಾದಿ ಅಪರ್ಣಾ ಭಟ್ ಅವರು ನ್ಯಾಯಾಲಯದಲ್ಲಿ ಅರ್ಜಿಯನ್ನು ಮುಂಚಿನ ವಿಚಾರಣೆಗೆ ಪ್ರಸ್ತಾಪಿಸಿದಾಗ ಮುಖ್ಯ ನ್ಯಾಯಮೂರ್ತಿ ಮಂಗಳವಾರ ಅರ್ಜಿಯನ್ನು ವಿಚಾರಣೆ ನಡೆಸಲು ಒಪ್ಪಿಕೊಂಡಿದ್ದರು. ಅಪರಾಧಿಗಳಿಗೆ ಕ್ಷಮಾದಾನ ನೀಡಿ ಬಿಡುಗಡೆ ಮಾಡಿದ ಕ್ರಮವನ್ನು ನಾವು ಪ್ರಶ್ನಿಸುತ್ತಿದ್ದೇವೆ. ಹದಿನಾಲ್ಕು ಜನರ ಹತ್ಯೆಯಾಯಿತು. ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಪ್ರಕರಣದ ಗಂಭೀರತೆ ಬಗ್ಗೆ ಹೇಳಿದ್ದಾರೆ. ನ್ಯಾಯಮೂರ್ತಿಗಳಾದ ಅಜಯ್ ರಸ್ಟೋಗಿ ಮತ್ತು ವಿಕ್ರಮ್ ನಾಥ್ ತ್ರಿಸದಸ್ಯ ಪೀಠದಲ್ಲಿರಲಿದ್ದಾರೆ.
