
ಶಾಲೆಗಳಲ್ಲಿ ಗಣೇಶ ಹಬ್ಬ Vs ನಮಾಜ್ ಜಟಾಪಟಿ – ಶಿಕ್ಷಣ ಇಲಾಖೆ ಆದೇಶಕ್ಕೆ ವಕ್ಫ್ ಬೋರ್ಡ್ ಆಕ್ಷೇಪ – ಗಣೇಶೋತ್ಸವ ರೀತಿ ಮುಸ್ಲಿಂರ ಹಬ್ಬಕ್ಕೂ ಅವಕಾಶ ಕೊಡಿ – ಶಾಲೆಗಳಲ್ಲಿ ನಮಾಜ್ ಗೆ ಪ್ರತ್ಯೇಕ ಕೊಠಡಿ ಮೀಸಲಿಡಿ – ಈದ್ ಮಿಲಾದ್ ಆಚರಣೆಗೂ ಅವಕಾಶ ಮಾಡಿಕೊಡಿ
ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಶಿಕ್ಷಣ ಧರ್ಮ ದಂಗಲ್ ಎದ್ದಿದೆ. ಜಿಜಾಬ್ ನಂತರ ಇದೀಗ ಶಾಲೆಯಲ್ಲಿ ಧಾರ್ಮಿಕ ಹಬ್ಬ ಆಚರಣೆಗೆ ಅವಕಾಶ ನೀಡುವಂತೆ ವಕ್ಫ್ ಬೋರ್ಡ್ ಆಗ್ರಹ ಮಾಡುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಾಲೆಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಗೆ ಅನುಮತಿ ನೀಡಿಲ್ಲ, ಅವಕಾಶ ನೀಡುವುದು ಕೂಡ ಇಲ್ಲ.ಯಾವುದೇ ಕಾರಣಕ್ಕೂ
ಯಾವುದೇ ಧರ್ಮದ ಆಚರಣೆಗೆ ಸರ್ಕಾರ ಅವಕಾಶ ನೀಡುವುದಿಲ್ಲ. ವಕ್ಫ್ ಬೋರ್ಡ್ ಬೇಡಿಕೆಗಳನ್ನು ಸರ್ಕಾರ ಪುರಸ್ಕರಿಸುವುದಿಲ್ಲ. ಶಾಲೆಗಳಲ್ಲಿ ಗಣಪತಿ ಹಬ್ಬ ಆಚರಣೆ ಸರ್ಕಾರ ಜಾರಿಗೆ ತಂದಿದ್ದಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಶಾಲೆಗಳಲ್ಲಿ ಗಣಪತಿ ಮೂರ್ತಿ ಇಡಲಾಗುತ್ತಿದೆ ಎಂದರು.ಆದುದರಿಂದ ನ್ಯಾಯಾಲಯದ ಆದೇಶ ವನ್ನು ಸರಕಾರ ದಿಕ್ಕರಿಸುತ್ತಿದ್ದೂ ಮತ್ತೊಂದು ರೀತಿಯ ಸಂಘರ್ಷ ಎದುರಾಗುವ ಸಾಧ್ಯತೆ ಇದೆ.
ವಕ್ಫ್ ಬೋರ್ಡ್ ಇಟ್ಟ ಬೇಡಿಕೆಗಳೇನು?
ಗಣೇಶ ಹಬ್ಬದ ಹೆಸರಿನಲ್ಲಿ ಶಿಕ್ಷಣ ಇಲಾಖೆ ಮುಂದೆ ವಕ್ಫ್ ಬೋರ್ಡ್ ಹೊಸ ಬೇಡಿಕೆ ಇಡುವ ಮೂಲಕ ಮತ್ತೊಂದು ಧರ್ಮ ದಂಗಲ್ ಉಂಟಾಗಿದೆ. ಶಾಲೆಗಳಲ್ಲಿ ನಮಾಜ್‌ಗೆ ಪ್ರತ್ಯೇಕ ಕೊಠಡಿ ಮೀಸಲಿಡಬೇಕು, ನಮ್ಮ ಧಾರ್ಮಿಕ ಹಬ್ಬಗಳ ಆಚರಣೆಗೂ ಅವಕಾಶ ಮಾಡಿಕೊಡಬೇಕು, ಎಲ್ಲಾ ಧರ್ಮದ ಮಕ್ಕಳಿಗೂ ಸಮಾನ ಅವಕಾಶ ಸಿಗಬೇಕು, ಗಣೇಶ ಹಬ್ಬದಂತೆ ಈದ್ ಮಿಲಾದ್ ಹಬ್ಬದ ಆಚರಣೆಗೂ ಅವಕಾಶ ಕೊಡಬೇಕು, ಪ್ರತಿ ಮಕ್ಕಳಿಗೂ ಧರ್ಮದ ಕುರಿತು ಅರಿವು ಮೂಡಿಸಬೇಕು, ನೈತಿಕ ಶಿಕ್ಷಣ ಅಡಿ ಧಾರ್ಮಿಕ ಪಾಠ ಮಕ್ಕಳಿಗೆ ನೀಡಬೇಕು ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಫಿ ಸಾ ಅದಿ ಅವರು ಬೇಡಿಕೆ ಇಟ್ಟಿದ್ದಾರೆ.
ಶಿಕ್ಷಣ ಸಚಿವರ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ. ಹಿಜಾಬ್ ವಿವಾದ ಆದಾಗಲೂ ನಾವು ಒಂದು ವಿಷಯ ಸ್ಪಷ್ಟ ಪಡಿಸಿದ್ದೇವೆ. ಧಾರ್ಮಿಕ ವಿಚಾರಗಳನ್ನು ತಿಳಿಸುವ ಮೂಲಕ ಅಪನಂಬಿಕೆ ಹೋಗಲಾಡಿಸಬೇಕು. ಎಲ್ಲಾ ಧಾರ್ಮಿಕ ಆಚರಣೆಗಳಿಗೂ ಅವಕಾಶ ಮಾಡಿಕೊಡಬೇಕು. ಗಣೇಶೋತ್ಸವಕ್ಕೆ ಅವಕಾಶ ಕೊಟ್ಟ ರೀತಿಯಲ್ಲೇ ಇಸ್ಲಾಮಿಕ್ ಧಾರ್ಮಿಕ ಅವಕಾಶಕ್ಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
