

ಬೆಂಗಳೂರು: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ(Azadi Ka Amrit Mahotsav) ಕುಟುಂಬ ರಾಜಕಾರಣದ ಅಂತ್ಯದ ಬಗ್ಗೆ ಪ್ರಧಾನಿ ಮೋದಿ(Narendra Modi) ಹೇಳಿದ್ದಾರೆ. ಆ ಅಂತ್ಯದ ಕಾಲ ಅಮೃತ ಮಹೋತ್ಸವದಿಂದ ಪ್ರಾರಂಭವಾಗುತ್ತದೆ. ಇನ್ಮೇಲೆ ನನ್ನ ಮಗನಿಗೆ ಎಂಎಲ್ಎ ಬೇಕು, ಎಂಎಲ್ಸಿ ಬೇಕು, ಎಂಪಿ ಬೇಕು ಅನ್ನೋದು ನಡೆಯುವುದಿಲ್ಲ. ಕೆಲವೊಮ್ಮೆ ಚುನಾವಣಾ ಸಮಿತಿಯಲ್ಲಿರುವವರಿಗೆ ಟಿಕೆಟ್ ಸಿಗೋದಿಲ್ಲ ಎಂದು ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal) ಹೇಳಿಕೆ ನೀಡಿದ್ದಾರೆ.
ಬಿಜೆಪಿ ಸಂಸದೀಯ ಮಂಡಳಿ, ಚುನಾವಣಾ ಸಮಿತಿಯಲ್ಲಿ ಬಿಎಸ್ ಯಡಿಯೂರಪ್ಪಗೆ ಸ್ಥಾನ ಸಿಕ್ಕಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಯತ್ನಾಳ್, ಪಕ್ಷದ ಮುಂದಿನ ಭವಿಷ್ಯದ ಆಧಾರದಲ್ಲಿ ಈ ನಿರ್ಣಯ ಮಾಡಿದೆ ಎಂದರು. ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಕುಟುಂಬ ರಾಜಕಾರಣ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇನ್ಮುಂದೆ aa ಮಗನಿಗೆ MLA, MLC, MP ಟಿಕೆಟ್ ಬೇಕು ಅನ್ನಂಗಿಲ್ಲ. ಚುನಾವಣಾ ಸಮಿತಿಯಲ್ಲಿರುವವರಿಗೆ ಕೆಲವೊಮ್ಮೆ ಟಿಕೆಟ್ ಸಿಗುವುದಿಲ್ಲ. ನಾನೇ ಸಮಿತಿಯಲ್ಲಿದ್ದರೂ ಒಮ್ಮೊಮ್ಮೆ ಟಿಕೆಟ್ ಪಡೆಯಲಾಗುವುದಿಲ್ಲ. ಪ್ರಧಾನಿ ಮೋದಿ ನೇತೃತ್ವದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರು.
ನನ್ನನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದರೆ ಪಕ್ಷ ಗೆಲ್ಲಿಸುತ್ತೇನೆ
ಇನ್ನು ಇದೇ ವೇಳೆ, ನನ್ನನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದರೆ ಪಕ್ಷ ಗೆಲ್ಲಿಸುತ್ತೇನೆ. ರಾಜ್ಯದಲ್ಲಿ 150 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಯತ್ನಾಳ್ ಹೇಳಿದ್ರು. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ. ನನಗೆ ಸಿಎಂ ಆಗುವ ಎಲ್ಲಾ ಅರ್ಹತೆಗಳು ಇದೆ. ಬಿಎಸ್ವೈಗೆ ಪಕ್ಷದಲ್ಲಿ ಉನ್ನತ ಸ್ಥಾನಮಾನ ಸಿಕ್ಕಿದ್ದಕ್ಕೆ ಅಭಿನಂದಿಸುವೆ. ಮುಂದೆ ಯತ್ನಾಳ್ ಸೇರಿದಂತೆ ಎಲ್ಲರಿಗೂ ಬಿಎಸ್ವೈ ಟಿಕೆಟ್ ನೀಡಲಿ ಎಂದರು.