
ಮಂಗಳೂರು:ಗುರುಪುರ ಗ್ರಾ.ಪಂ ನಲ್ಲಿ ಅ.15ರಂದು ಆಯೋಜಿಸಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸಾವರ್ಕರ್ ಭಾವಚಿತ್ರ ಪ್ರದರ್ಶನ ತಡೆದವರನ್ನು ಬಂದಿಸುವಂತೆ ಅ.16ರಂದು ಮಂಗಳೂರು ಹೊರವಲಯದ ಗುರುಪುರ ಗ್ರಾ.ಪಂ ಎದುರು ಬಿಜೆಪಿ ಕಾರ್ಯಕರ್ತರು ಮತ್ತು ಪಂಚಾಯತ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

ಸಾವರ್ಕರ್ ಫೋಟೋ ಹಿಡಿದು ಕಾರ್ಯಕರ್ತರ ಪ್ರತಿಭಟನೆ ನಡೆಸಿ, ಎಸ್ ಡಿಪಿಐ ಕಾರ್ಯಕರ್ತರ ಬಂಧಿಸದೇ ಇದ್ದಲ್ಲಿ ಉಗ್ರ ಪ್ರತಿಭಟನೆ ಎಚ್ಚರಿಕೆಯನ್ನು ನೀಡಿದ್ದಾರೆ. ಹೀಗಾಗಲೇ ಎಸ್ ಡಿಪಿಐಗೆ ಸೇರಿದ ಕಾರ್ಯಕರ್ತರ ವಿರುದ್ಧ ಬಜಪೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

