
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಫ್ರಿಸ್ಲಾನ್‌ನಲ್ಲಿ ಐಟಿಬಿಪಿ ಪ್ರಯಾಣಿಸುತ್ತಿದ್ದ ಬಸ್ ಉರುಳಿದ ಬಿದ್ದು 6 ಮಂದಿ ಸಾವಿಗೀಡಾಗಿದ್ದು,ಮೂವರಿಗೆ ಗಾಯಗಳಾಗಿವೆ. ಈ ಯೋಧರನ್ನು ಅಮರನಾಥ ಯಾತ್ರೆಯ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು. 39 ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಸಿವಿಲ್ ಬಸ್ ಬ್ರೇಕ್ ಫೇಲ್ ಆದ ನಂತರ ರಸ್ತೆ ಬದಿಯ ನದಿಯ ತಳಕ್ಕೆ ಬಿದ್ದಿದೆ. ಯೋಧರು ಚಂದನ್ವಾರಿಯಿಂದ ಪಹಲ್ಗಾಮ್ ಕಡೆಗೆ ಹೋಗುತ್ತಿದ್ದರು. ಹೆಚ್ಚಿನ ಯೋಧರಿಗೆ ಗಾಯಗಳಾಗಿರುವ ಸಾಧ್ಯತೆ ಇದೆ . ಮಾಹಿತಿ ನಿರೀಕ್ಷಿಸಲಾಗಿದೆ ಎಂದು ಐಟಿಬಿಪಿ ಹೇಳಿದೆ.

ಪೊಲೀಸ್ ಮತ್ತು ಇತರ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ.