

ಬಂಟ್ವಾಳ : ಖಿದ್ಮತುಲ್ ಇಸ್ಲಾಂ ಕಮಿಟಿ ಪರ್ಲಿಯ ಇದರ ವತಿಯಿಂದ 75 ನೇ ಸ್ವಾತಂತ್ರದ ಅಮೃತಮಹೋತ್ಸವ ವನ್ನುಆಚರಿಸಲಾಯಿತು.
ಅರಫಾ ಜುಮ್ಮಾ ಮಸೀದಿ ಪರ್ಲಿಯ ಇದರ ಅಧ್ಯಕ್ಷರಾದ ಸಿದ್ದಿಕ್ ಹಾಜಿ ಡಿ. ಪಿ ಧ್ವಜಾರೋಹಣಗೈದರು. ಮುಖ್ಯ ಅತಿಥಿ ಯಾಗಿ ದಾವೂದು ಹನಿಫೀ ಅಡ್ಡೂರು, ಶಾಹುಲ್ ಹಮೀದ್ S P,ಇಕ್ಬಾಲ್ ಎ ಕೆ
ಸ್ವಾತಂತ್ರ್ಯೋತ್ಸವದ ಸಂದೇಶವನ್ನು ನೀಡಿ, ಶರಿಯತ್ ಕಾಲೇಜಿನ ಪ್ರಾಂಶುಪಾಲರಾದ ಅಬ್ದುಲ್ ಸಮದ್ ಅನ್ಸಾರಿ ಮುಖ್ಯ ಪ್ರಭಾಷಣಗೈದರು. ಮದ್ರಸ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದು ಮಸೀದಿ ಪ್ರಧಾನ ಕಾರ್ಯದರ್ಶಿ ಅಕ್ಬರ್ ಸಿದ್ದಿಕ್ ಸ್ವಾಗತಿಸಿದರು.
