
ಮಂಗಳೂರು: ವಿದ್ಯಾರ್ಥಿಗಳು ಸಾವರ್ಕರ್ ಫೋಟೋ ಹಿಡಿದು ನೃತ್ಯ ಮಾಡಿದ್ದು ಎಸ್ ಡಿಪಿಐ ಆಕ್ಷೇಪ ವ್ಯಕ್ತಪಡಿಸಿದ ಘಟನೆ ಮಂಗಳೂರು ಹೊರವಲಯದ ಗುರುಪುರ ಗ್ರಾ.ಪಂ ನಲ್ಲಿ ಅ.15ರಂದು ನಡೆದಿದೆ.

ಗುರುಪುರ ಗ್ರಾ.ಪಂ ನಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಗುರುಪುರ ಬೆಥನಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಸಾವರ್ಕರ್ ಫೋಟೋ ಹಿಡಿದಿದ್ದ ನೃತ್ಯ ಮಾಡುತ್ತಿದ್ದ ವೇಳೆ ಎಸ್ ಡಿಪಿಐ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ಪಂಚಾಯತ್ ಆಡಳಿತದ ಜೊತೆಗೆ ಎಸ್ ಡಿಪಿಐ ಮುಖಂಡರ ನಡುವೆ ಮಾತುಕತೆ ನಡೆದಿದ್ದು ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
