

ಮಿತ್ತಬೈಲ್ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ
ಮುಹಿಯ್ಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಹಾಗೂ SKSSF ಶಾಂತಿಅಂಗಡಿ ಶಾಖೆ ಮತ್ತು SKSBV ಮುಹಿಯ್ಯುದ್ದೀನ್ ಮದರಸ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನುಆಚರಿಸಲಾಯಿತು.

ಎಂಜೆಎಂ ಮಸೀದಿಯ ಅಧ್ಯಕ್ಷರಾದ ಮುಹಮ್ಮದ್ ಸಾಗರ್ ಧ್ವಜಾರೋಹಣಗೈದರು, ಮುದರ್ರಿಸ್ ಉಮರುಲ್ ಫಾರೂಕ್ ಫೈಝಿದುವಾ ನೆರವೇರಿಸಿ,SKSSF ಶಾಂತಿಅಂಗಡಿ ಶಾಖೆ ಅಧ್ಯಕ್ಷರಾದ ಸತ್ತಾರ್ ಕೈಕಂಬ ಅಧ್ಯಕ್ಷತೆ ವಹಿಸಿದರು, SKSSF ಬಂಟ್ವಾಳ ವಲಯ ಅಧ್ಯಕ್ಷರಾದ ಇರ್ಷಾದ್ ದಾರಿಮಿ ಮಿತ್ತಬೈಲ್ ಕಾರ್ಯಕ್ರಮದ ಉದ್ಘಾಟಿಸಿದರು , SKSSF ಕೇಂದ್ರ ಸಮಿತಿ ಸದಸ್ಯರಾದ ಬಶೀರ್ ಮಜಲ್ ಪ್ರತಿಜ್ಞಾಭೋಧನೆಗೈದು, ಮಿತ್ತಬೈಲ್ ಸದರ್ ಅಧ್ಯಾಪಕರಾದ ಇಬ್ರಾಹಿಂ ದಾರಿಮಿ ನಂದರಬೆಟ್ಟು ಸಂದೇಶ ಭಾಷಣಗೈದರು.

ಕಾರ್ಯಕ್ರಮದಲ್ಲಿ ಮಿತ್ತಬೈಲ್ ಮಸೀದಿ ಪ್ರ.ಕಾರ್ಯದರ್ಶಿ ಹಾಗೂ SKSSF ಮಿತ್ತಬೈಲ್ ಕ್ಲಸ್ಟರ್ ಅಧ್ಯಕ್ಷರಾದ ಅಶ್ರಫ್ ಶಾಂತಿಅಂಗಡಿ, ಮಿತ್ತಬೈಲ್ ಮಸೀದಿ ಉಪಾಧ್ಯಕ್ಷರಾದ ಸೈಯದ್ ಫಲುಲ್ ತಂಙಳ್, ಮಿತ್ತಬೈಲ್ ಮಸೀದಿ ಮಾಜಿ ಅಧ್ಯಕ್ಷರಾದ ಹಮೀದ್ ಹಾಜಿ, ಮಿತ್ತಬೈಲ್ ಮಸೀದಿ ಸದಸ್ಯರಾದ ಮುಹಮ್ಮದ್ ಅದ್ದೇಡಿ ಹಾಗೂ ಆದಂ ಪಲ್ಲ, SKSSF ಶಾಂತಿಅಂಗಡಿ ಶಾಖೆಯ ಪ್ರ.ಕಾರ್ಯದರ್ಶಿ ರಫೀಕ್ ಶಾಂತಿಅಂಗಡಿ, SKSSF ಶಾಂತಿಅಂಗಡಿ ಶಾಖೆಯ ಕೋಶಾಧಿಕಾರಿ ಮುಹಮ್ಮದ್ ಶರೀಫ್, ಆಡಳಿತ ಸಮಿತಿ ಪದಾಧಿಕಾರಿಗಳು, ಮಿತ್ತಬೈಲ್ ಮದರಸ ಅಧ್ಯಾಪಕರು, ಮಿತ್ತಬೈಲ್ ಪಳ್ಳಿ ದರ್ಸ್ ಮುಅಲ್ಲಿಮ್, SKSBV ಮದರಸ ವಿದ್ಯಾರ್ಥಿಗಳು ಹಾಗೂ SKSSF ಶಾಂತಿಅಂಗಡಿ ಶಾಖೆಯ ವರ್ಕಿಂಗ್ ಕಾರ್ಯದರ್ಶಿ ಅಝೀಮ್ ತಲಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು