

ಬಂಟ್ವಾಳ : ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞಾನರ ಸಹಕಾರಿ ಒಕ್ಕೂಟ (ರಿ )ಮತ್ತು ಶ್ರೀ ವಿಠ್ಠಲ್ ಶೆಟ್ಟಿ ಫೌಂಡೇಶನ್ ಹಾಗೂ ಅರ್ಕುಳ,ಫರಂಗಿಪೇಟೆ,ಮೇರಮಜಲು,ಅಬ್ಬೆಟ್ಟು, ಮೆರ್ಲ ಪದವು ಇಲ್ಲಿನ ಸಂಘಸಂಸ್ಥೆಗಳ ಸಹಕಾರದೊಂದಿಗೆ ತುಳುವೆರೆ ತುಲಿಪು ಕಾರ್ಯಕ್ರಮ ಅರ್ಕುಳ ತುಪ್ಪ ಕಲ್ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಬಂಟ್ವಾಳ ತುಳುವೆರ್ ತುಲಿಪು ಕಾರ್ಯಕ್ರಮಸಾಧಕರಿಗೆ ಮತ್ತು ಊರ ಹಿರಿಯರಿಗೆ ಸನ್ಮಾನ ಕಾರ್ಯಕ್ರಮವು ಪ್ರವೀಣ್ ಕೊಡಿಯಾಲ್ ಬೈಲ್ ಇವರ ಅಧ್ಯಕ್ಷತೆಯಲ್ಲಿ ಅರ್ಕುಳ ಬಿಡು ಶ್ರೀ ವಜ್ರನಾಭ ಶೆಟ್ಟಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ತುಳು ಚಿತ್ರ ಕಲಾವಿದರ ಮತ್ತು ತಂತ್ರಜ್ಞಾನರ ರೊಂದಿಗೆ ಕೆಸರುಗದ್ದೆ ಗ್ರಾಮೀಣ ಆಟೋಟ ಸ್ಪರ್ಧೆ, ಸಾಧಕರಿಗೆ ಮತ್ತು ಊರ ಹಿರಿಯರಿಗೆ ಸನ್ಮಾನ ಕಾರ್ಯಕ್ರಮವುನಡೆಯಿತು.
ಹಿರಿಯ ಕಲಾವಿದರು,ನಿರ್ದೇಶಕರು ನಿರ್ಮಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


