

ಪದರಂಗಿ: ನೂತನ ಮಸೀದಿಗೆ ಶಿಲಾನ್ಯಾಸ ಕಾರ್ಯಕ್ರಮ
ಎಡಪದವು: ಪದರಂಗಿ ಬದ್ರುಲ್ ಹುದಾ ಮದರಸ ಇಲ್ಲಿ ನೂತನವಾಗಿ ನಿರ್ಮಿಸಲಿರುವ ಜುಮಾ ಮಸೀದಿ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಜರುಗಿತು.
ಸಮಸ್ತ ಕೇಂದ್ರ ಮುಶಾವರ ಸದಸ್ಯರು, ಕೂರ್ನಡ್ಕ ಖಾಝಿ ಶೈಖುನಾ ಅಲ್ ಹಾಜ್ ಬಿ.ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ದುವಾ: ಹಾಗೂ ಶಿಲಾನ್ಯಾಸ ನೆರವೇರಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಮೂಲ್ಕಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಉದ್ಯಮಿ ಎಂ.ಬಿ. ಶಾಫಿ ಮೂಲರಪಟ್ನ, ಅಬ್ದುಲ್ ರಹಿಮಾನ್ ಫೈಝಿ, ಬದ್ರುಲ್ ಹುದಾ ಮದರಸ ಪದ್ರೆಂಗಿ ಅಧ್ಯಕ್ಷರಾದ ಮುಹಮ್ಮದ್ ಮುಸ್ತಫಾ, ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಚೊಕ್ಕಬೆಟ್ಟು ಅಧ್ಯಕ್ಷರಾದ ಬಷೀರ್, ಹಾಜಿ ಎಂ.ಆದಂ, ಪಿ.ಎ. ಬಾವಾ ಹಾಜಿ, ಪುತ್ತುಮೋನು ಮಾರ್ಗದಂಗಡಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಈ ಸಂದರ್ಭ ಇನಾಯತ್ ಆಲಿ ಮೂಲ್ಕಿ ರವರನ್ನು ಆಡಳಿತ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
