
ಮಂಗಳೂರು ದಕ್ಷಿಣ ಕನ್ನಡ
ಮೈಸೂರಿನಲ್ಲಿ ಆಗಸ್ಟ್ 7 ರಂದು ಆರಂಭಗೊಳ್ಳಲಿರುವ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯ ಮೊದಲ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಸೆಣಸಲಿರುವ ಮಂಗಳೂರು ಯುನೈಟೆಡ್ ತಂಡವು ಪ್ರಧಾನ ಕೋಚ್ ಸ್ಟುವರ್ಟ್ ಬಿನ್ನಿ ಅವರ ಗರಡಿಯಲ್ಲಿ ಪಳಗಿರುವ ಸ್ಮಾರ್ ಆಟಗಾರರನ್ನು ಅಂಗಣಕ್ಕಿಳಿಸಲಿದೆ. ಸ್ಟುವರ್ಟ್ ಬಿನ್ನಿ ಮತ್ತು ಸಹಾಯಕ ಕೋಚ್ ಸಿ. ರಾಘವೇಂದ್ರ ಹಾಗೂ ಆಯ್ಕೆಗಾರರಾದ ಎಂ.ವಿ. ಪ್ರಶಾಂತ್ ಮನೋಹನ್ ಹಾಗೂ ಆರ್. ಸಮರ್ಥ್ ಅವರಂತಹ ಆಟಗಾರರನ್ನು ಒಳಗೊಂಡಿರುವ ತಂಡವನ್ನು ಅಂಗಣಕ್ಕಿಳಿಸಲಿದ್ದಾರೆ. ಈ ಕುರಿತು ಮಂಗಳೂರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಮೆನನ್, ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20ಯಲ್ಲಿ ಮಂಗಳೂರು ಜಿಲ್ಲೆಯು ತನ್ನದೇ ಆದ ತಂಡವನ್ನು ಹೊಂದಿದೆ ಎಂಬುದನ್ನು ಪಕಟಿಸಲು ಸಂತಸವಾಗುತ್ತಿದೆ ಎಂದರು.
