
ಮಂಗಳೂರು: ಸುರತ್ಕಲ್‌ನಲ್ಲಿ ನಡೆದಿದ್ದ ಫಾಜಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಳಸುತ್ತಿದ್ದ ಕಾರು ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕಾರು ಮಾಲೀಕ ಸುರತ್ಕಲ್ ಕೋಡಿಕೆರೆ ನಿವಾಸಿ ಅಜಿತ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಅಜಿತ್ ಈ ಹಿಂದೆ ಖಾಸಗಿ ಬಸ್ ಕಂಡಕ್ಟರ್ ಅಗಿ ಕೆಲಸ ಮಾಡುತ್ತಿದ್ದ ಮದುವೆಯಾದ ಬಳಿಕ ಕಾರು ಬಾಡಿಗೆಗೆ ನೀಡುವ ಉದ್ಯಮವನ್ನು ಪ್ರಾರಂಭಿಸಿದ್ದ.
ಅಜಿತ್ ಬಳಿ ಸ್ವಿಫ್ಟ್, ಸ್ವಿಫ್ಟ್ ಡಿಸೈರ್, ಇಯೋನ್ ಈ 3ಕಾರುಗಳಿದ್ದು, ಇವುಗಳನ್ನು ಬಾಡಿಗೆಗೆ ನೀಡುತ್ತಿದ್ದ. ಫಾಜಿಲ್ ಹತ್ಯೆ ವೇಳೆಯೂ ಪರಿಚಯಸ್ಥ ಹಂತಕರು ಇಯೋನ್ ಕಾರು ಬಾಡಿಗೆ ಪಡೆದು ಈ ಕೃತ್ಯ ಎಸಗಿದ್ದರು ಎನ್ನಲಾಗಿದೆ. ಇನ್ನು ಅಜಿತ್ ಯಾವ ರೀತಿ ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.
