
ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ (Praveen Nettar) ಕೊಲೆ ಪ್ರಕರಣ ಮಾಸುವ ಮುನ್ನವೆ ನಗರ ಹೊರವಲಯದ ಸುರತ್ಕಲ್ನಲ್ಲಿ ಫಾಜಿಲ್ ಮಂಗಲಪೇಟೆ (Fazil Murder) (23) ಹತ್ಯೆ ಎಂಬ ಯುವಕನ ಹತ್ಯೆಯಾಗಿದೆ. ಫಾಜಿಲ್ ಹತ್ಯೆಯ ನಂತರ ಅನುಮಾನಾಸ್ಪದವಾಗಿ ಕಂಡುಬಂದ 12 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿ ಎಂದು ಮಂಗಳೂರು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು. ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿಕೆ ನೀಡಿದ್ದು, ನಿಷೇಧಾಜ್ಞೆ ಉಲ್ಲಂಘಿಸಿದ 14 ಜನರನ್ನು ವಶಕ್ಕೆ ಪಡೆದಿದ್ದೇವೆ. ಫಾಜಿಲ್ ಹತ್ಯೆ ಪ್ರಕರಣ ಸಂಬಂಧ ಸಿಸಿಟಿವಿ ದೃಶ್ಯಗಳನ್ನಾಧರಿಸಿ ಕೆಲವರನ್ನ ವಶಕ್ಕೆ ಪಡೆದಿದ್ದೇವೆ. ಎಲ್ಲವೂ ಶಾಂತಿಯುತವಾಗಿ ನಡೆಯುತ್ತಿದೆ ಎಂದು ಹೇಳಿದರು. ಸುರತ್ಕಲ್ನ ಗಣೇಶಪುರದಲ್ಲಿ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ.
ಮೃತ ಫಾಜಿಲ್ ಮೃತ ದೇಹ ಮನೆಗೆ ತಲುಪಿದ್ದು, ಸಾರ್ವಜನಿಕ ಅಂತಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಗರದ ಖಾಸಗಿ ಆಸ್ಪತ್ರೆಯಿಂದ ಸುರತ್ಕಲ್ ಮಂಗಳಪೇಟೆವರೆಗೆ ಮೆರವಣಿಗೆ ಮೂಲಕ ಫಾಝಿಲ್ ಮೃತ ದೇಹ ತರಲಾಗಿದ್ದು, ಫಾಝಿಲ್ ಸ್ವಗೃಹದಲ್ಲಿ ಅಂತಿ ದರ್ಶನಕ್ಕೆ ಸಾರ್ವಜನಿಕರು ಜಮಾಯಿಸಿದ್ದಾರೆ. ಪುರುಷರಿಗೆ ಅಂತಿಮ ದರ್ಶನಕ್ಕೆ ಮಂಗಳಪೇಟೆ ಮೊಹಿದ್ದೀನ್ ಜುಮಾ ಮಸೀದಿಯಲ್ಲಿ ಅವಕಾಶ ಮಾಡಲಾಗಿದೆ. ಮಸೀದಿಯಲ್ಲಿ ಫಾಜಿಲ್ ಪಾರ್ಥಿವ ಶರೀರಕ್ಕೆ ಪ್ರಾರ್ಥನೆ ಸಲ್ಲಿಕೆ ಬಳಿಕ ಮಸೀದಿಯ ಕಬರ್ ಸ್ಥಾನದಲ್ಲಿ ದಫನ್ ಕಾರ್ಯ ನಡೆಯಲಿದೆ. ಫಾಝೀಲ್ ಅಂತೀಮ ದರ್ಶನದಲ್ಲಿ ಐವನ್ ಡಿಸೋಜ, ಮೋಹಿದ್ದೀನ್ ಮಾಜಿ ಶಾಸಕರು ಭಾಗಿಯಾಗಿದ್ದರು.
