
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಶವ ಮೆರವಣಿಗರ ವೇಳೆ ಕೆಲ ದುಷ್ಕರ್ಮಿಗಳು ಅಹಿತಕರ ಘಟನೆ ನಡೆಸಿ ಶಾಂತಿ ಕೆಡವಲು ಮುಂದಾಗಿದ್ದು ಈ ವೇಳೆ ಪೊಲೀಸರು ಲಾಠೀ ಪ್ರಹಾರ ಮಾಡಿದ್ದಾರೆ.
ಬೆಳ್ಳಾರೆಯಲ್ಲಿ ಕಲ್ಲು ತೂರಾಟ ನಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ಸ್ಥಳದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಇನ್ನು ಶವ ಯಾತ್ರೆಯ ವಿಡಿಯೋ ಮಾಡುತ್ತಿದ್ದ ಮುಸ್ಲಿಂ ಯುವಕನ ಬೈಕ್ ನ್ನು ಕೂಡ ಹಾನಿಗೊಳಿಸಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಅದಲ್ಲದೆ ಪೊಲೀಸ್ ಲಾಠೀ ಚಾರ್ಜ್ ಗೆ ಓರ್ವ ಯುವಕ ಗಾಯಗೊಂಡಿದ್ದಾನೆ ಎನ್ನಲಾಗಿದೆ.
