
ಮಂಗಳೂರು :
ಸುಳ್ಯದ ಕಳಂಜದಲ್ಲಿ ಬಿಜೆಪಿಯವರು ಗುಂಪು ಸೇರಿ ಅಮಾಯಕನನ್ನು ಸಾಯಿಸಿದ್ದಾರೆ.ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆಗಡುಕ ಪಕ್ಷವಾಗಿದೆ.ಇಲ್ಲಿನ ಯಾವುದೇ ಹತ್ಯೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಎಫ್ಐಆರ್ ಇಲ್ಲ.ರಾಷ್ಟ್ರೀಯ ಪಕ್ಷ ಬಿಜೆಪಿ ಮತ್ತು ಮತೀಯ ಪಕ್ಷಗಳ ಮೇಲೆ ಎಫ್ಐಆರ್ ಇದೆ.ಕಾಂಗ್ರೆಸ್ ಕಾರ್ಯಕರ್ತನನ್ನು ಪಂಚಾಯತ್ ನುಗ್ಗಿ ಹತ್ಯೆ ಮಾಡಿದ್ದಾರೆ.ಸುಳ್ಯದಲ್ಲಿ ಘಟನೆ ಆಗಿದ್ದರೂ ಅಲ್ಲಿನ ಸಚಿವ ಅಂಗಾರ ಮೃತರ ಕುಟುಂಬದ ಭೇಟಿ ಆಗಿಲ್ಲ. ಎಂದರು.ಹರ್ಷನಿಗೆ 25 ಲಕ್ಷ ಕೊಟ್ಟಿದ್ದಾರೆ, ಹಾಗೆಯೇ ಮಸೂದನಿಗೂ 25 ಲಕ್ಷ ಪರಿಹಾರ ಕೊಡಬೇಕು.ಸುಳ್ಯ ಪ್ರಕರಣದಲ್ಲಿ ಪೊಲೀಸರು ಸೂಕ್ತ ತನಿಖೆ ಮಾಡಬೇಕು ಎಂದು ಕಾಂಗ್ರೆಸ್ ಭವನದಲ್ಲಿ ಮಾಜಿ ಸಚಿವ ರಮಾನಾಥ ರೈ ಅಗ್ರಹಿಸಿದ್ದಾರೆ.
ಸುಳ್ಯ ಪ್ರಕರಣದಲ್ಲಿ ಪೊಲೀಸರು ಸೂಕ್ತ ತನಿಖೆ ಮಾಡಬೇಕು ಎಂದು ಕಾಂಗ್ರೆಸ್ ಭವನದಲ್ಲಿ ಮಾಜಿ ಸಚಿವ ರಮಾನಾಥ ರೈ ಅಗ್ರಹಿಸಿದ್ದಾರೆ