
ಪ್ರವಾದಿಗೆ ನಿಂದನೆ ವಿರೋಧಿಸಿ ವಿಶ್ವದ 15 ರಾಷ್ಟ್ರಗಳಲ್ಲಿ ಮುಂದುವರಿದ ಪ್ರತಿಭಟನೆ
ನವದೆಹಲಿ: ಬಿಜೆಪಿ ನಾಯಕರಾದ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್,ಪ್ರವಾದಿ ಮುಹಮ್ಮದ್ (ಸ. ಅ )ಅವರ ಬಗ್ಗೆ ನೀಡಿರುವ ಅವಮಾನಕಾರಿ ಹೇಳಿಕೆಗೆ ವಿಶ್ವದಾದ್ಯಂತ ರಾಜತಾಂತ್ರಿಕ ಖಂಡನೆ ಮುಂದುವರಿದಿದೆ.
ಕೇಂದ್ರ ಸರ್ಕಾರವು ವಿವಿಧ ದೇಶಗಳಲ್ಲಿನ ವಿರೋಧವನ್ನು ಶಮನಗೊಳಿಸಲು ಪ್ರಯತ್ನಿಸುತ್ತಿದೆ, ಭಾರತ ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ ಎಂದು ಪ್ರತಿಪಾದಿಸಿದೆ.
ಇರಾನ್, ಇರಾಕ್, ಕುವೈತ್, ಕತಾರ್, ಸೌದಿ ಅರೇಬಿಯಾ, ಓಮನ್, ಯುಎಇ, ಇರಾನ್, ಜೋರ್ಡಾನ್, ಅಫ್ಘಾನಿಸ್ತಾನ, ಬಹ್ರೇನ್, ಮಾಲ್ಡೀವ್ಸ್, ಲಿಬಿಯಾ ಮತ್ತು ಇಂಡೋನೇಷ್ಯಾ ಸೇರಿದಂತೆ ಕನಿಷ್ಠ 15 ದೇಶಗಳು ವಿವಾದಾತ್ಮಕ ಹೇಳಿಕೆಗಳ ಕುರಿತು ಭಾರತದ ವಿರುದ್ಧ ಅಧಿಕೃತ ಪ್ರತಿಭಟನೆಗಳನ್ನು ನಡೆಸಿದೆ. ಜೊತೆಗೆ ರಾಯಭಾರಿಗಳಿಗೆ ನೊಟೀಸ್ ನೀಡಿದೆ.
ಭಾರತ ಸರ್ಕಾರವನ್ನು ವಿಶ್ವದ ಹಲವು ರಾಷ್ಟ್ರಗಳು ಕ್ಷಮೆಯಾಚಿಸಲು ಒತ್ತಾಯಿಸಿದೆ. ಈ ಬಗ್ಗೆ ವಿರೋಧ ಪಕ್ಷಗಳು ಇಬ್ಬರು ಉಚ್ಛಾಟಿತ ಬಿಜೆಪಿ ನಾಯಕರ ಬಂಧನಕ್ಕೆ ಆಗ್ರಹಿಸಿದೆ. ಬಿಜೆಪಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಇಮೇಜ್ ನ್ನು ಕೆಡಿಸಿದೆ ಎಂದು ಆರೋಪಿಸಿದೆ.
